ಗುರುವಾರ, ಡಿಸೆಂಬರ್ 15, 2011

ಕರವೇ ಹೋರಾಟಕ್ಕೆ ಮೆಟ್ರೋನಿಂದ ಉತ್ತರ

ದಿನಾಂಕ ೨.೧೨.೨೦೧೧ ರಂದು ಕರ್ನಾಟಕ ರಕ್ಷಣಾ ವೇದಿಕೆ, ನಮ್ಮ ಮೆಟ್ರೋನಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಮತ್ತು ಬಾಶಾ ನೀತಿಯಲ್ಲಿ ಆಗಿರುವ ಅನ್ಯಾಯ ನೀಗಿಸಬೇಕು ಎಂದು ಒತ್ತಾಯಿಸಿ ಮನವಿ ಪತ್ರವನ್ನ ನೀಡಿದ್ದರು. ಇದಕ್ಕೆ ಉತ್ತರವಾಗಿ ಮೇಟ್ರೋನಿಂದ ಕರವೇಗೆ ಬಂದಿರುವ ಉತ್ತ್ತರದ ಪ್ರತಿಯನ್ನ ಕರವೇ ವೆಬ್ ಸೈಟ್ (http://karave.blogspot.com/2011/12/krv-horatakke-metrodinda-uttara.html)ನಲ್ಲಿ ಹಾಕಲಾಗಿದೆ.

ಈ ಉತ್ತರದ ಪ್ರಕಾರ ಮೆಟ್ರೋ ನಲ್ಲಿ ಉದ್ಯೋಗಕ್ಕೆ ಕನ್ನಡ ಬಲ್ಲವರನ್ನ ಮಾತ್ರ ಕೆಲಸಕ್ಕೆ ನೇಮಿಸಿಕೊಳ್ಳಬೇಕೆಂದು ಆದೇಶ ಹೊರಡಿಸಿರುವುದಾಗಿಯೂ ಮತ್ತು ಇದರ ಜೊತೆಗೆ  ಬದ್ರತಾ ಸೇವೆ ಮತ್ತು ಸ್ವಚ್ಚತಾ ಕೆಲಸಗಳನ್ನ ಹೊರಗುತ್ತಿಗೆ ನೀಡಲಾಗಿದ್ದು ಅಂತಹಾ ಹೊರಗುತ್ತಿಗೆದಾರ  ಏಜೆನ್ಸಿಗಳು ಕೂಡ ಕನ್ನಡ ಓದಲು ಬರೆಯಲು ಮತ್ತು ಮಾತನಾಡಲು
ಬಲ್ಲವರನ್ನ ಮಾತ್ರ ನೇಮಿಸಿಕೊಳ್ಳಬೇಕೆಂಬ ಶರತ್ತನ್ನ ವಿದಿಸಿ ಕರಾರನ್ನ ಮಾಡಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ಇದೊಂದು ಒಳ್ಳೆಯ ಬೆಳವಣಿಗೆಯಾಗಿದ್ದು ನಿಜವಾಗಿಯೂ ನಮ್ಮ ಮೆಟ್ರೋನ ಮತ್ತು ಹೊರಗುತ್ತಿಗೆ ಉದ್ಯೋಗಗಳು ಕನ್ನಡ ಬಲ್ಲವರಿಗೆ ಮಾತ್ರ  ಎಂಬ  ಆದೇಶ ಕಟ್ಟು ನಿಟ್ಟಾಗಿ ಜಾರಿಯಾಗುವಂತೆ ನೊಡಿಕೊಳ್ಳಬೇಕಾಗಿದೆ. ಇದೆಲ್ಲವುದರ ಜೊತೆಗೆ ಮುಕ್ಯವಾಗಿ  ಕರ್ನಾಟಕ ರಾಜ್ಯದಲ್ಲಿ ಕನ್ನಡ ಆಡಳಿತ ಬಾಶೆ ಮತ್ತು ತನ್ನ ಎಲ್ಲಾ ಕಚೇರಿ ವ್ಯವಹಾರಗಳನ್ನ ಕನ್ನಡ ಬಾಶೆಯಲ್ಲೆ ವ್ಯವಹರಿಸುವುದು ನಮ್ಮ ಮೆಟ್ರೋ ನ ಜವಾಬ್ದಾರಿಯೆಂದು ಮತ್ತು ಕರ್ನಾಟಕ ಸರಕಾರದ ನೀತಿ ನಿಯಮಗಳಿಗೆ ತಮ್ಮ ಸಂಸ್ತೆಯು ಶ್ರದ್ದೆಯ ಸಹಮತ ಸೂಚಿಸುತ್ತದೆ ಎಂದೂ ಸಹ ಹೇಳಿರುತ್ತಾರೆ. ಇದೇ ನಿಟ್ಟಿನಲ್ಲಿ ನಮ್ಮ ಮೆಟ್ರೋ ತನ್ನ ಅಂತರ್ಜಾಲದಲ್ಲಿ ಕನ್ನಡಕ್ಕೆ ಆದ್ಯತೆಯನ್ನ ನೀಡಿ ಸಾರ್ವಜನಿಕರಿಗೆ ಕನ್ನಡ  ಮಾಹಿತಿಯನ್ನ ತಿಳಿಸುವಂತೆ
ಸುತ್ತೋಲೆಗಳನ್ನು ಹೊರಡಿಸಲಾಗಿದೆ ಎಂದೂ ಸಹ ತಿಳಿಸಿದ್ದಾರೆ, ಈ ಸುತ್ತೋಲೆ ಜಾರಿರೂಪಕ್ಕೆ ಬಂದರೆ ಮಾತ್ರ ನಿಜಕ್ಕು ಕನ್ನಡಿಗರಿಗೆ ಉಪಯೋಗವಾಗುತ್ತದೆ.

ಇದರ ಜೊತೆಗೆ ಹಿಂದಿ ಬಾಶೆಯ ಬಳಕೆಯ ಬಗ್ಗೆ ನಮ್ಮ ಮೆಟ್ರೋನ ಉತ್ತರ ಮಾತ್ರ ಸಮಂಜಸವಾಗಿಲ್ಲವೆನ್ನಿಸುತ್ತದೆ. ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರದ ಸಹಯೋಗದ ಸಂಸ್ತೆಯೆಂದ ಮಾತ್ರಕ್ಕೆ ಹಿಂದಿಯನ್ನ ಬಳಸಿದ್ದಿವಿ  ಎನ್ನೊವುದು ಸರಿಯಲ್ಲದ ಕ್ರಮವಾಗಿದೆ.

ಈ ಆದೇಶಗಳ ಬಗ್ಗೆ ಇಲ್ಲಿಯವರೆಗೂ ಎಲ್ಲಿಯೂ ಮೆಟ್ರೋ ಹೇಳಿರುವುದನ್ನ ನಾನೆಂದೂ ಕಂಡಿಲ್ಲ ಮತ್ತು ಕರವೇ ಹೋರಾಟದ ಪಲವಾಗಿ ನೀಡಿರುವ ಉತ್ತರ ನಿಜಕ್ಕೂ ಕರವೇ ಹೋರಾಟಕ್ಕೆ ಸಿಕ್ಕ ಜಯವಾಗಿದೆ. ಈ ಉತ್ತರದ ಆದಾರದ ಮೇಲೆ  ಉದ್ಯೋಗದ ವಿಶಯದಲ್ಲಿ ಮತ್ತು ತನ್ನ ಆಡಳಿತದ ವಿಶಯದಲ್ಲಿ ಹೊರಡಿಸಿರುವ ಆದೇಶಗಳ ಅನುಶ್ಟಾನ ಆಗುವ ವರೆಗೆ ಮೆಟ್ರೋ ಮೇಲೆ ಒತ್ತಡ ಹಾಕುವ ಕೆಲಸದಲ್ಲಿ ಕರವೇ ಜೊತೆಗೆ ಕೈಜೋಡಿಸಬೇಕಾದ್ದು ನಮ್ಮ ಕರ್ತವ್ಯವೆಂದು ಬಾವಿಸುತ್ತೇನೆ. ಇದೆಲ್ಲವುದರ ಜೊತೆಗೆ ಅನಗತ್ಯ ಹಿಂದಿ ಬಳಕೆಯನ್ನ ಸಹ ಕೈಬಿಡುವಂತೆ ಸಹಾ ಒತ್ತಡ
ಹಾಕಬೇಕಾಗಿದೆ.

5 ಕಾಮೆಂಟ್‌ಗಳು:

  1. ಅರುಣ್,

    ನಿಮ್ಮ ಪೋಸ್ಟ್ ಮತ್ತು ನಿಮ್ಮ ಯೋಜನೆಗಳು ಪ್ರಶಂಸನೀಯ. ಇದಕ್ಕೆ ನನ್ನ ಹಾರೈಕೆ ಮತ್ತು ಬೆಂಬಲ ಸದಾ ಇರುತ್ತದೆ. ಹಾಗೆ ಒಂದು ಮನವಿ, ನಿಮ್ಮ ಬರವಣಿಗೆಯಲ್ಲಿ ದಯವಿಟ್ಟು ಸ್ವಲ್ಪ ಅಲ್ಪಪ್ರಾಣ/ಮಹಾಪ್ರಾಣ ಮತ್ತು ಒತ್ತಕ್ಷರಗಳ ಬಗ್ಗೆ ಗಮನ ಇರಲಿ.

    ನಿಮ್ಮ ವಿಶ್ವಾಸಿ,
    ಶರತ್

    ಪ್ರತ್ಯುತ್ತರಅಳಿಸಿ
  2. ಶರತ್, ನಿಮ್ಮ ಕಮೆಂಟ್ ಗೆ ನನ್ನಿ....
    ಮಾತನಾಡುವಂತೆ ಬರೆಯುವ ಒಂದು ಪ್ರಯತ್ನದಂತೆ ಈ ಬರಹ ಬರೆದಿದ್ದೇನೆ. ಅದ್ದರಿಂದ ಮಹಾಪ್ರಾಣಗಳನ್ನ ನನ್ನ ಲೇಕನದಲ್ಲಿ ಬಳಸಿಲ್ಲ.

    ಅರುಣ್

    ಪ್ರತ್ಯುತ್ತರಅಳಿಸಿ
  3. No. Dayavitutu Mahaprana/Alpapranadha bagge gamana irli.
    Adu aaadu bhaashe aagli .This is on internet younger generation shouldn't learn wrong kannada out of this.

    ಪ್ರತ್ಯುತ್ತರಅಳಿಸಿ
  4. ಆಡು ಭಾಷೆ ಬಳಸೋಣ, ಆದರೆ ನಾವು ಭಾಷಾ ನೀತಿಯ ಬಗ್ಗೆ ಮಾತಾಡುವಾಗ 'ಬಾಶಾ','ಲೇಕನ' - ಈ ರೀತಿಯ ಪ್ರಯೋಗ ಮಾಡಿದರೆ ಅಷ್ಟು ಸಮಂಜಸವಲ್ಲ ಅಂತ ನನ್ನ ಅನಿಸಿಕೆ.

    ಪ್ರತ್ಯುತ್ತರಅಳಿಸಿ
  5. ಅರುಣ್ ಜಾವಗಲ್,
    ನಿಮ್ಮ ಕನ್ನಡದ ಕಾಳಜಿ ಬಗ್ಗೆ ಮಾತನಾಡುವಂತಿಲ್ಲ. ಹಾಗೆಯೇ ಬರವಣಿಗೆಯ ಕಡೆ ಗಮನವಿರಲಿ. ಅಲ್ಲೊಂದು ಇಲ್ಲೊಂದು ತಪ್ಪಾಗುವುದು ಸಹಜ. ಆದರೆ ಇಲ್ಲಿನ ನಿಮ್ಮ ಪ್ರತಿಕ್ರಿಯೆ "ಮಾತನಾಡುವಂತೆ ಬರೆಯುವ ಒಂದು ಪ್ರಯತ್ನದಂತೆ ಈ ಬರಹ ಬರೆದಿದ್ದೇನೆ. ಅದ್ದರಿಂದ ಮಹಾಪ್ರಾಣಗಳನ್ನ ನನ್ನ ಲೇಕನದಲ್ಲಿ ಬಳಸಿಲ್ಲ."ಯನ್ನು ಗಮನಿಸಿದರೆ ನೀವು ಉದ್ದೇಶ ಪೂರ್ವಕವಾಗಿಯೇ ಮಹಾಪ್ರಾಣಗಳನ್ನು ಬಳಸಿಲ್ಲವೆಂದು ತೋರುತ್ತದೆ. ನೀವು ಹೇಳಿದಂತೆ ಮಾತನಾಡುವ ಪ್ರಯತ್ನದಂತೆಯೂ ಸಹ ಮಹಾಪ್ರಾಣ ಬಳಕೆಯಾಗಲೇ ಬೇಕು. ಇಲ್ಲವೆಂದರೆ ಅಂತಹ ಮಾತುಗಳು ನೀರಸವಾಗುತ್ತವೆ.
    ಮೇಲಾಗಿ ಅಷ್ಟೊಂದು ಕನ್ನಡ ಬಾರದವರು (ಕಲಿಕೆಯ ಹಂತದಲ್ಲಿರುವವರು) ನಿಮ್ಮ ಬರಹವನ್ನು ನೋಡಿ ಆ ಪದಗಳೇ ಸರಿ ಅಂದುಕೊಂಡು ಅವರೂ ಅವನ್ನೇ ಬಳಸತೊಡಗಿದರೆ ? ನಿಮ್ಮಿಂದಾಗಿ ಭಾಷೆಗೆ ಅಪಚಾರ ಎಸಗಿದಂತಾಗುತ್ತದೆ.
    ನನ್ನ ವಿನಂತಿ ಇಷ್ಟೇ, ಉದ್ದೇಶಪೂರ್ವಕವಾಗಿ ತಪ್ಪಾಗಿ ಬರೆಯಬೇಡಿ.

    ಪ್ರತ್ಯುತ್ತರಅಳಿಸಿ