ನಮ್ಮ ನಾಡಿಗೆ ಉಪಯೋಗವಾಗಲೆಂದು ಬೆಂಗಳೂರು ಅಂತರಾಶ್ಟ್ರೀಯ ವಿಮಾನ ನಿಲ್ದಾಣ
ನಿರ್ಮಾಣವಾಗಲು ಕನ್ನಡದ ಸಾವಿರಾರು ರೈತರು ತಮ್ಮ ಬೂಮಿಯನ್ನು ನೀಡಿದ್ದಾರೆ ಜೊತೆಗೆ
ಕರ್ನಾಟಕ ಸರಕಾರವೂ ಸಹ ಹಣಕಾಸಿನ ನೆರವನ್ನು ನೀಡಿದೆ. ಆದರೆ ಕನ್ನಡದ ರೈತರ ಬೂಮಿಯನ್ನು,
ಕರ್ನಾಟಕ ಸರಕಾರದ ಹಣವನ್ನು ಪಡೆದ ವಿಮಾನ ನಿಲ್ದಾಣ ಕನ್ನಡ-ಕನ್ನಡಿಗ-ಕರ್ನಾಟಕಕ್ಕೆ ಎಶ್ಟರ ಮಟ್ಟಿಗೆ
ಮನ್ನಣೆ ನೀಡಿದೆ?
ಬೆಂಗಳೂರು ವಿಮಾನ ನಿಲ್ದಾಣದ ಕನ್ನಡ-ಕನ್ನಡಿಗ-ಕರ್ನಾಟಕ ವಿರೋದಿ ದೋರಣೆಯ ಕೆಲವು ಸ್ಯಾಂಪಲ್ ಗಳನ್ನು ಒಮ್ಮೆ ಗಮನಿಸಿ-
೧. ವಿಮಾನ ನಿಲ್ದಾಣದಲ್ಲಿನ ಪಾರ್ಕಿಂಗ್ ಸ್ಟಿಕರ್ ಗಳು ಕೇವಲ ಇಂಗ್ಲೀಶ್ ನಲ್ಲಿದೆ.
೨. ಸೂಚನಾ ಪಲಕಗಳಲ್ಲಿ ಕನ್ನಡವನ್ನು ಬಳಸಿದ್ದರೂ, ಕನ್ನಡಕ್ಕೆ ಕೊನೆಯ ಸ್ತಾನ ನೀಡಲಾಗಿದ್ದು ಎಶ್ಟಾಗುತ್ತೋ ಅಶ್ಟು ಸಣ್ಣಕ್ಷರದಲ್ಲಿ 'ಕಾಟಾಚಾರ'ಕ್ಕೆ ಬರೆಸಿದ್ದಾರೆ
೩. ವಿಮಾನ ನಿಲ್ದಾಣದಲ್ಲಿರುವ ಕಾವಲುಗಾರರೊಡನೆ ಕನ್ನಡದಲ್ಲಿ ಮಾತನಾಡಿ ಅವರಿಂದ ಬೈಯಿಸಿಕೊಂಡ ಉದಾಹರಣೆಗಳಿವೆ
೪. ಹೊರಡುವ ಮತ್ತು ಬರುವ ವಿಮಾನಗಳ ಬಗ್ಗೆ ಟಿವಿಗಳಲ್ಲಿ ತೋರಿಸುವ ಮಾಹಿತಿ ಬರಿಯ ಇಂಗ್ಲೀಶ್ /ಹಿಂದಿಯಲ್ಲಿದೆ
೫. ವಿಮಾನ ನಿಲ್ದಾಣದ ಒಳಗೆ ಇಂಗ್ಲೀಶ್ ಮತ್ತು ಹಿಂದಿಯಲ್ಲಿ ಮಾತ್ರ ಸೂಚನೆಗಳನ್ನು ನೀಡಲಾಗುತ್ತಿದೆ.
೬. ನಿಲ್ದಾಣದಲ್ಲಿ ಕನ್ನಡ ಪತ್ರಿಕೆಗಳಗೆ ಇರುವ ಸ್ತಾನದ ಬಗ್ಗೆ ಹೇಳಬೇಕಾಗಿಯೇನು ಇಲ್ಲ.
ಹೀಗೆ ಇನ್ನೂ ಹಲವೆಡೆಗಳಲ್ಲಿ ಇಂಗ್ಲೀಶ್ ಮತ್ತು ಹಿಂದಿಗೆ ಮನ್ನಣೆ ನೀಡಿ ಕನ್ನಡವನ್ನು ಹಿಂದಕ್ಕೆ ತಳ್ಳಲಾಗಿದೆ.
ಒಟ್ಟಾರೆಯಾಗಿ ಗಮನಿಸಿದರೆ ಕನ್ನಡ-ಕನ್ನಡಿಗ-ಕರ್ನಾಟಕರನ್ನು ವಿಮಾನ ನಿಲ್ದಾಣದಲ್ಲಿ ಎರಡೆನೇ ದರ್ಜೆಯಂತೆ ನೋಡಲಾಗುತ್ತಿದೆ. ನಮ್ಮ ರಾಜ್ಯ ಸರಕಾರದ ಹಣದಿಂದ ಮತ್ತು ನಮ್ಮ ರೈತರ ಬೂಮಿಯಲ್ಲಿ ನಮಗೆ ಬರೆ ಹಾಕಿ ಪರರಿಗೆ ಮನ್ನಣೆ ನೀಡಲಾಗಿರುವುದು ನಿಜಕ್ಕೂ ದುರಂತವೇ ಸರಿ. ಜಗತ್ತಿನ ಹಲವಾರು ದೇಶಗಳಲಿನ ಅಂತರಾಶ್ಟ್ರೀಯ ವಿಮಾನ ನಿಲ್ದಾಣಗಳನ್ನು ನೋಡಿದಾಗ ಅಲ್ಲೆಲ್ಲೂ ಅಂತರಾಶ್ಟ್ರೀಯ ಎಂದ ಮಾತ್ರಕ್ಕೆ ತಮ್ಮ ತನವನ್ನು ಮರೆತಿರುವುದು ಕಾಣುವುದಿಲ್ಲ.. ತಮ್ಮ ತನಕ್ಕೆ ಮೊದಲನೇ ಮನ್ನಣೆ ನೀಡುವುದರ ಮೂಲಕ ತಮ್ಮ ನಾಡಿನ ಜನರಿಗೆ ಉಪಯೋಗವಾಗುವಂತೆ ವ್ಯವಸ್ತೆಯನ್ನು ರೂಪಿಸಿದ್ದಾರೆ. ಆದರೆ, ನಮ್ಮ ನಾಡಿನ ವಿಮಾನ ನಿಲ್ದಾಣಕ್ಕೆ ನಮ್ಮ ನಾಡಿನ ಜನರು ಹೋಗಬೇಕೆಂದರೆ ಇಂಗ್ಲೀಶ್ ಅತವಾ ಹಿಂದಿಯನ್ನು ಕಲಿತು ಹೋಗಬೇಕೆನ್ನುವ ಅನಿವಾರ್ಯತೆಯನ್ನು ನಿರ್ಮಿಸಿದ್ದಾರೆ. ಇದು ಏಕೆ ಎಂದು ಪ್ರಶ್ನಿಸುವ ಕನ್ನಡದ ಪ್ರಯಾಣಿಕರಿಗೆ ನಿಲ್ದಾಣದ ಅದಿಕಾರಿಗಳು ಉದ್ದಟತನದ ಉತ್ತರಗಳನ್ನೂ ನೀಡಿರುವ ಉದಾಹರಣೆಗಳಿವೆ,
ಅಂತರಾಶ್ಟ್ರೀಯ ಅಂತ ಹೆಸರನ್ನು ಇಟ್ಟುಕೊಂಡ ಮಾತ್ರಕ್ಕೆ ನಮ್ಮ ತನವನ್ನು ಬಿಟ್ಟುಕೊಡುವುದು ಯಾತಕ್ಕಾಗಿ? ಅಂತರಾಶ್ಟ್ರೀಯವಾಗಲಿ ಮತ್ತೊಂದಾಗಲಿ ಕೊನೆಗೆ ವಿಮಾನ ನಿಲ್ದಾಣವಿರುವುದು ಕನ್ನಡದ ನೆಲದಲ್ಲೆ ಎನ್ನುವುದನ್ನು ಮರೆಯಬಾರದು, ಇದನ್ನು ಮರೆತಿರುವ ವಿಮಾನ ನಿಲ್ದಾಣಕ್ಕೆ ಮತ್ತು ಸರಕಾರದವರಿಗೆ ಪತ್ರಬರೆದು ಕನ್ನಡದ ನೆಲದಲ್ಲಿ ಕನ್ನಡ-ಕನ್ನಡಿಗ-ಕರ್ನಾಟಕಕ್ಕೆ ಮೊದಲ ಸ್ತಾನ ಸಿಕ್ಕೇ ಸಿಗಬೇಕು ಎನ್ನುವುದನ್ನು ತಿಳಿಸೋಣ..
ವಿಮಾನ ನಿಲ್ದಾಣದ ಮತ್ತು ಕರ್ನಾಟಕ ಸರಕಾರದ ಮುಕ್ಯಮಂತ್ರಿಗಳ ಮಿಂಚೆ- feedback@bialairport.com, cm@kar.nic.in