ಮಂಗಳವಾರ, ಜೂನ್ 19, 2012

ಬೆಂಗಳೂರು ಅಂತರಾಶ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕನ್ನಡಿಗ ಎರಡನೇ ದರ್ಜೆ ಪ್ರಯಾಣಿಕ

ನಮ್ಮ ನಾಡಿಗೆ ಉಪಯೋಗವಾಗಲೆಂದು  ಬೆಂಗಳೂರು ಅಂತರಾಶ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣವಾಗಲು ಕನ್ನಡದ ಸಾವಿರಾರು ರೈತರು ತಮ್ಮ ಬೂಮಿಯನ್ನು ನೀಡಿದ್ದಾರೆ ಜೊತೆಗೆ ಕರ್ನಾಟಕ ಸರಕಾರವೂ ಸಹ ಹಣಕಾಸಿನ ನೆರವನ್ನು ನೀಡಿದೆ. ಆದರೆ ಕನ್ನಡದ ರೈತರ ಬೂಮಿಯನ್ನು, ಕರ್ನಾಟಕ ಸರಕಾರದ ಹಣವನ್ನು ಪಡೆದ ವಿಮಾನ ನಿಲ್ದಾಣ ಕನ್ನಡ-ಕನ್ನಡಿಗ-ಕರ್ನಾಟಕಕ್ಕೆ ಎಶ್ಟರ ಮಟ್ಟಿಗೆ ಮನ್ನಣೆ ನೀಡಿದೆ?

ಬೆಂಗಳೂರು ವಿಮಾನ ನಿಲ್ದಾಣದ ಕನ್ನಡ-ಕನ್ನಡಿಗ-ಕರ್ನಾಟಕ ವಿರೋದಿ ದೋರಣೆಯ ಕೆಲವು ಸ್ಯಾಂಪಲ್ ಗಳನ್ನು ಒಮ್ಮೆ ಗಮನಿಸಿ-

೧. ವಿಮಾನ ನಿಲ್ದಾಣದಲ್ಲಿನ ಪಾರ್ಕಿಂಗ್ ಸ್ಟಿಕರ್ ಗಳು ಕೇವಲ ಇಂಗ್ಲೀಶ್ ನಲ್ಲಿದೆ.

೨. ಸೂಚನಾ ಪಲಕಗಳಲ್ಲಿ ಕನ್ನಡವನ್ನು ಬಳಸಿದ್ದರೂ, ಕನ್ನಡಕ್ಕೆ ಕೊನೆಯ ಸ್ತಾನ ನೀಡಲಾಗಿದ್ದು ಎಶ್ಟಾಗುತ್ತೋ ಅಶ್ಟು ಸಣ್ಣಕ್ಷರದಲ್ಲಿ 'ಕಾಟಾಚಾರ'ಕ್ಕೆ ಬರೆಸಿದ್ದಾರೆ

೩. ವಿಮಾನ ನಿಲ್ದಾಣದಲ್ಲಿರುವ ಕಾವಲುಗಾರರೊಡನೆ ಕನ್ನಡದಲ್ಲಿ ಮಾತನಾಡಿ ಅವರಿಂದ ಬೈಯಿಸಿಕೊಂಡ ಉದಾಹರಣೆಗಳಿವೆ
೪. ಹೊರಡುವ ಮತ್ತು ಬರುವ ವಿಮಾನಗಳ ಬಗ್ಗೆ ಟಿವಿಗಳಲ್ಲಿ ತೋರಿಸುವ ಮಾಹಿತಿ ಬರಿಯ ಇಂಗ್ಲೀಶ್ /ಹಿಂದಿಯಲ್ಲಿದೆ
೫. ವಿಮಾನ ನಿಲ್ದಾಣದ ಒಳಗೆ ಇಂಗ್ಲೀಶ್ ಮತ್ತು ಹಿಂದಿಯಲ್ಲಿ ಮಾತ್ರ ಸೂಚನೆಗಳನ್ನು ನೀಡಲಾಗುತ್ತಿದೆ.
೬. ನಿಲ್ದಾಣದಲ್ಲಿ ಕನ್ನಡ ಪತ್ರಿಕೆಗಳಗೆ ಇರುವ ಸ್ತಾನದ ಬಗ್ಗೆ ಹೇಳಬೇಕಾಗಿಯೇನು ಇಲ್ಲ.

ಹೀಗೆ ಇನ್ನೂ ಹಲವೆಡೆಗಳಲ್ಲಿ ಇಂಗ್ಲೀಶ್ ಮತ್ತು ಹಿಂದಿಗೆ ಮನ್ನಣೆ ನೀಡಿ ಕನ್ನಡವನ್ನು ಹಿಂದಕ್ಕೆ ತಳ್ಳಲಾಗಿದೆ.

ಒಟ್ಟಾರೆಯಾಗಿ ಗಮನಿಸಿದರೆ ಕನ್ನಡ-ಕನ್ನಡಿಗ-ಕರ್ನಾಟಕರನ್ನು ವಿಮಾನ ನಿಲ್ದಾಣದಲ್ಲಿ ಎರಡೆನೇ ದರ್ಜೆಯಂತೆ ನೋಡಲಾಗುತ್ತಿದೆ. ನಮ್ಮ ರಾಜ್ಯ ಸರಕಾರದ ಹಣದಿಂದ ಮತ್ತು ನಮ್ಮ ರೈತರ ಬೂಮಿಯಲ್ಲಿ ನಮಗೆ ಬರೆ ಹಾಕಿ ಪರರಿಗೆ ಮನ್ನಣೆ ನೀಡಲಾಗಿರುವುದು ನಿಜಕ್ಕೂ ದುರಂತವೇ ಸರಿ. ಜಗತ್ತಿನ ಹಲವಾರು ದೇಶಗಳಲಿನ ಅಂತರಾಶ್ಟ್ರೀಯ ವಿಮಾನ ನಿಲ್ದಾಣಗಳನ್ನು ನೋಡಿದಾಗ ಅಲ್ಲೆಲ್ಲೂ ಅಂತರಾಶ್ಟ್ರೀಯ ಎಂದ ಮಾತ್ರಕ್ಕೆ ತಮ್ಮ ತನವನ್ನು ಮರೆತಿರುವುದು ಕಾಣುವುದಿಲ್ಲ.. ತಮ್ಮ ತನಕ್ಕೆ ಮೊದಲನೇ ಮನ್ನಣೆ ನೀಡುವುದರ ಮೂಲಕ ತಮ್ಮ ನಾಡಿನ ಜನರಿಗೆ ಉಪಯೋಗವಾಗುವಂತೆ ವ್ಯವಸ್ತೆಯನ್ನು ರೂಪಿಸಿದ್ದಾರೆ. ಆದರೆ, ನಮ್ಮ ನಾಡಿನ ವಿಮಾನ ನಿಲ್ದಾಣಕ್ಕೆ ನಮ್ಮ ನಾಡಿನ ಜನರು ಹೋಗಬೇಕೆಂದರೆ ಇಂಗ್ಲೀಶ್ ಅತವಾ ಹಿಂದಿಯನ್ನು ಕಲಿತು ಹೋಗಬೇಕೆನ್ನುವ ಅನಿವಾರ್ಯತೆಯನ್ನು ನಿರ್ಮಿಸಿದ್ದಾರೆ. ಇದು ಏಕೆ ಎಂದು ಪ್ರಶ್ನಿಸುವ ಕನ್ನಡದ ಪ್ರಯಾಣಿಕರಿಗೆ ನಿಲ್ದಾಣದ ಅದಿಕಾರಿಗಳು ಉದ್ದಟತನದ ಉತ್ತರಗಳನ್ನೂ ನೀಡಿರುವ ಉದಾಹರಣೆಗಳಿವೆ,

ಅಂತರಾಶ್ಟ್ರೀಯ ಅಂತ ಹೆಸರನ್ನು ಇಟ್ಟುಕೊಂಡ ಮಾತ್ರಕ್ಕೆ ನಮ್ಮ ತನವನ್ನು ಬಿಟ್ಟುಕೊಡುವುದು ಯಾತಕ್ಕಾಗಿ? ಅಂತರಾಶ್ಟ್ರೀಯವಾಗಲಿ ಮತ್ತೊಂದಾಗಲಿ ಕೊನೆಗೆ ವಿಮಾನ ನಿಲ್ದಾಣವಿರುವುದು ಕನ್ನಡದ ನೆಲದಲ್ಲೆ ಎನ್ನುವುದನ್ನು ಮರೆಯಬಾರದು, ಇದನ್ನು ಮರೆತಿರುವ ವಿಮಾನ ನಿಲ್ದಾಣಕ್ಕೆ  ಮತ್ತು ಸರಕಾರದವರಿಗೆ ಪತ್ರಬರೆದು ಕನ್ನಡದ ನೆಲದಲ್ಲಿ ಕನ್ನಡ-ಕನ್ನಡಿಗ-ಕರ್ನಾಟಕಕ್ಕೆ ಮೊದಲ ಸ್ತಾನ ಸಿಕ್ಕೇ ಸಿಗಬೇಕು ಎನ್ನುವುದನ್ನು ತಿಳಿಸೋಣ..
ವಿಮಾನ ನಿಲ್ದಾಣದ ಮತ್ತು ಕರ್ನಾಟಕ ಸರಕಾರದ ಮುಕ್ಯಮಂತ್ರಿಗಳ ಮಿಂಚೆ- feedback@bialairport.com, cm@kar.nic.in

11 ಕಾಮೆಂಟ್‌ಗಳು:

  1. ನಮ್ಮ ಸರ್ಕಾರಕ್ಕೆ ನಾಚಿಕೆ ಆಗಬೇಕು ಇಸ್ಟೆಲ್ಲಾ ಆದರು ಕೈ ಕಟ್ಟಿಕೊಂಡು ಕುಳ್ತಿದಾರೆ, ಇನ್ನು ಎಸ್ಟೋ ರೈತರು ತಮ್ಮ ಜಮೀನನ್ ದುಡ್ಡು ಬಂದಿಲ್ಲ. ರೈತ್ ಇದರಿಂದ ಕಂಗಳ ಆಗಿದ್ದಾನೆ....!!!

    ಪ್ರತ್ಯುತ್ತರಅಳಿಸಿ
  2. ಕನ್ನಡಿಗ ಎರಡನೇ ದರ್ಜೆಯ ನಾಗರಿಕ ಅಂತ ಯಾರು ಹೇಳಿದರು? ಸರಿಯಾಗಿ ನೋಡಿದರೆ, ಮೂರನೇ ದರ್ಜೆಯ ನಾಗರಿಕ. ಕನ್ನಡವನ್ನೂ ಬಳಸಿರುವುದು ಮೂರನೇ ಸ್ಥಾನದಲ್ಲಿ. ಕೆಲವು ದಿನಗಳ ಹಿಂದೆ, ಯಾರೋ ಹೇಳಿದರು. ಕನ್ನಡದಲ್ಲಿ ಬರೆದಿರುವುದನ್ನು ಓದಲು ಏಣಿಯ ವ್ಯವಸ್ಥೆ ಮಾಡಿ ಎಂದು.

    ಪ್ರತ್ಯುತ್ತರಅಳಿಸಿ
  3. Hi i am subbu's frd nice to see the same article published in thatskannada.com
    FYI
    http://kannada.oneindia.in/response/2012/kannada-neglected-at-bangalore-international-airport-066066.html
    Also Subbu told how you got this issue when u visited airport along with him. Jai Kannada maathe

    ಪ್ರತ್ಯುತ್ತರಅಳಿಸಿ
  4. Murthy, ದನ್ಯವಾದ ಸಾರ್, ಈ ಲೇಕನವನ್ನು ನಾನೇ ದಟ್ಸ್ ಕನ್ನಡಕ್ಕೆ ಕಳುಹಿಸಿ ಕೊಟ್ಟಿದ್ದೇನೆ.

    ಪ್ರತ್ಯುತ್ತರಅಳಿಸಿ
  5. ನಮ್ಮ ಸಾಹಿತಿಗಳು ಇದರ ಬಗ್ಗೆ ಚಕಾರ ಎತ್ತುತ್ತಿಲ್ಲ ??

    ಪ್ರತ್ಯುತ್ತರಅಳಿಸಿ
  6. ಇದು( ಈ ಲೇಖನ) ಹೆಚ್ಚಿನಂಶ ಕನ್ನಡಿಗರ ಗಮನ ಸೆಳೆದಿಲ್ಲಾ ಯಾಕೆಂದರೆ ಇಲ್ಲಿ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಇಲ್ಲಾ..ನಾನು ನಿನ್ನೆ ಹಾಕಿದ ಅಭಿಪ್ರಾಯ ಇಲ್ಲಿ ಕಾಣುವುದಿಲ್ಲ .. ಎಲ್ಲೋ ತಪ್ಪಿರಬೇಕು. ನಾನು ನಿನ್ನೆಯೇ ಮಿಂಚಂಚೆ ಕಳುಹಿಸಿದ್ದೇನೆ ಅಲ್ಲದೆ FaceBook ನಲ್ಲಿ ಇರುವ ಎಲ್ಲ ಕನ್ನಡ ಪುಟಗಳಲ್ಲಿ ಹಾಕಿದ್ದೇನೆ.. ಆದರೆ ಪ್ರತಿಕ್ರಿಯೆ ನೀರಸ.. ಹೀಗಿದ್ದಾಗ ಕನ್ನಡವು ಈಗ ಎಷ್ಟು ಇದೆಯೋ ಅದಕ್ಕೆ ನಾವು ನಿಲ್ದಾಣ ಮಂಡಳಿಗೆ ತುಂಬಾ ಆಭಾರಿಯಾಗಬೇಕು

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಸದಾಶಿವ ರವರೆ, ಹೌದು ತಾವು ಹೇಳುವುದು ಒಪ್ಪುವಂತಹದ್ದೇ. ಈ ತರದ ವಿಶಯಗಳು ಹೆಚ್ಚಿನ ಜನರಿಗೆ ಬೇಡ. ಆದುದ್ದರಿಂದಲೇ ಇಂದು ವಿಮಾನ ನಿಲ್ದಾಣದಲ್ಲಿ ಕನ್ನಡವನ್ನು ಕಡೆಗಣಿಸುತ್ತಿರುವುದು. ತಾವು ಹೇಳಿದಂತೆ ಈ ತರಹದ ವಿಶಯಗಳಿಗೆ ಪ್ರತಿಕ್ರಿಯೆ ಸಿಕ್ಕಿದ್ದೇ ಆಗಿದ್ದಲ್ಲಿ ಈ ಲೇಕನ ಬರೆಯುವ ಅವಶ್ಯಕತೆಯೇ ಇರುತ್ತಿರಲಿಲ್ಲ.

      ಅಳಿಸಿ
  7. tumba kannada spelling mistakes ide, dayavittu modalu nivu nimma maneya angalavannu saripadisida nanathara oorige beli haakalu hogi....

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಸ್ನೇಹಾ, ರವರೆ ತಮ್ಮ ಸಲಹೆಗೆ ದನ್ಯವಾದಗಳು, ತಮಗೆ ಕನ್ನಡದ ಹೊಸ ಬರಹದ ಬಗ್ಗೆ ಇತ್ತೀಚೆಗೆ ನಡೆಯುತ್ತಿರುವ ಚರ್ಚೆಯ ಬಗ್ಗೆ ತಿಳಿದಿಲ್ಲ ಎಂದು ಬಾವಿಸಿದ್ದೀನಿ. ಸಮಯ ಸಿಕ್ಕಾಗ ಈ ಮಿಂಬಲೆಯನ್ನು ನೋಡಿ-http://ellarakannada.org/

      ಅಳಿಸಿ
  8. ಸ್ನೇಹಾ, ರವರೆ ತಮ್ಮ ಸಲಹೆಗೆ ದನ್ಯವಾದಗಳು, ತಮಗೆ ಕನ್ನಡದ ಹೊಸ ಬರಹದ ಬಗ್ಗೆ ಇತ್ತೀಚೆಗೆ ನಡೆಯುತ್ತಿರುವ ಚರ್ಚೆಯ ಬಗ್ಗೆ ತಿಳಿದಿಲ್ಲ ಎಂದು ಬಾವಿಸಿದ್ದೀನಿ. ಸಮಯ ಸಿಕ್ಕಾಗ ಈ ಮಿಂಬಲೆಯನ್ನು ನೋಡಿ-http://ellarakannada.org/

    ಪ್ರತ್ಯುತ್ತರಅಳಿಸಿ
  9. ಹೊರ ದೇಶದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಭಾಷಾಭಿಮಾನವನ್ನು ಕಂಡು ನನಗೆ ನಮ್ಮ ಕನ್ನಡ ನಾಡಿನ ಬಗ್ಗೆ ಹೆಮ್ಮೆ ಕಡಿಮೆ ಆಗಿದೆ. ಜರ್ಮನೀ ಅನತಹ ದೇಶದಲ್ಲಿ ಜರ್ಮನ್ ಬಳಕೆ ಮಾಡುತ್ತಾರೆ. ನಮ್ಮ ಕನ್ನಡ ಭಾಷೆಗೆ ಲಿಪಿ ಕೂಡ ಇದೆ. ಆದರೂ ನಾವು ನಮ್ಮ ಭಾಷೆಯನ್ನು ಬಳಕೆ ಮಾಡುವುದಿಲ್ಲ.

    ಪ್ರತ್ಯುತ್ತರಅಳಿಸಿ