ಮಂಗಳವಾರ, ಏಪ್ರಿಲ್ 19, 2011

ಡಬ್ಬಿಂಗ್ ಬೇಕು/ಬೇಡ ಅನ್ನೋದನ್ನ ಪ್ರೇಕ್ಷಕ ನಿರ್ಧಾರ ಮಾಡ್ಲಿ




ಮನೋರಂಜನೆ ಎನ್ನೋದು ಎಲ್ಲರ ಹಕ್ಕು, ಒಬ್ಬ ವ್ಯಕ್ತಿ ಮನೊರಂಜನೆಯನ್ನು ತನ್ನ ಭಾಷೆಯಲ್ಲೆ ಪಡೆಯುವುದು ಕೂಡ ಆ ವ್ಯಕ್ತಿಯ ಹಕ್ಕೂ ಕೂಡ. ಇದನ್ನ ತಡೆಯಲು ಯಾವುದೇ ಕಾನೂನು ಮುಂದೆಬರುವುದಿಲ್ಲ. ಇದಕ್ಕಾಗಿಯೇ ಇರಬೇಕು ಇಂದಿಗೂ ಕನ್ನಡಕ್ಕೆ ಡಬ್ ಮಾಡಬಾರದು ಅನ್ನೋ ಕಾನೂನು ಇಲ್ಲ.

ಚಲನಚಿತ್ರಗಳು, ವಾಣಿಜ್ಯ ಮಂಡಳಿ ಅಥವಾ ಇನ್ಯಾವುದೋ ಸಂಸ್ಥೆ ಪ್ರೇಕ್ಷಕನಿಗೆ ನೀಡುತ್ತಿರುವ ಬಿಕ್ಷೆಯಲ್ಲ. ಪ್ರತಿಯೊಬ್ಬ ಪ್ರೇಕ್ಷಕನೂ ತನಗೆ ಬೇಕಾದ ಚಿತ್ರವನ್ನು ದುಡ್ಡು ಕೊಟ್ಟು ನೋಡ್ತಾನೆ ಹೊರೆತು ಬಿಟ್ಟಿಯಾಗಿ ಅಲ್ಲ. ಅದರಿಂದ ಯಾವ ಸಿನೆಮಾ ನೋಡ್ಬೇಕು ಅಥವಾ ಯಾವ ಸಿನೆಮಾ ನೋಡ್ಬಾರ್ದು ಅನ್ನೊದನ್ನ ಪ್ರೇಕ್ಷಕ ನಿರ್ಧಾರ ಮಾಡ್ತಾನೆ. ಕಾನೂನು ಇಲ್ಲದಿದ್ದರೂ ಸಹ, ಕನ್ನಡಿಗನಿಗೆ ಪ್ರಪಂಚದ ಒಳ್ಳೆಒಳೆಯ ಚಿತ್ರಗಳನ್ನು ತನ್ನ ಭಾಷೆಯಲ್ಲೇ ನೋಡಲು ಆಗದಿರುವಂತೆ ಮಾಡಿರುವುದು ಗೋರ ಅಪರಾದ ಮತ್ತು ಇದು ಮಾನವ ಹಕ್ಕುಗಳ ಉಲ್ಲಂಗನೆ ಅಂತಲೂ ಹೇಳಬಹುದಾಗಿದೆ.



ಇಂದು ಡಬ್ಬಿಂಗ್ ಅನ್ನು ವಿರೋಧಿಸುತ್ತಿರುವವರು ಪರಭಾಶೆಯ ಚಿತ್ರವನ್ನೇ ನೋಡುತ್ತಿಲ್ಲ ಎಂದೇನಿಲ್ಲ. ಡಬ್ಬಿಂಗ್ ಸಿನೆಮಾ ಬಿಡುಗಡೆಯಾದರೆ ಬೀದಿಗಿಳಿದು ಹೋರಾಟ ಮಾಡುತ್ತೇನೆ ಎಂದು ಹೇಳೋ ಚಿತ್ರರಂಗದ ನಾಯಕರೊಬ್ಬರ ಮನೆಯಲ್ಲಿ ಇಂದಿಗೂ ಪರಭಾಷೆಯ ಚಿತ್ರಗಳನ್ನ ತಮ್ಮ ಮನೆಗೇ ತರಿಸಿಕೊಂಡು ನೋಡೋ ಸಂಪ್ರದಾಯ ಇದೆಯಂತೆ..... ರಜನೀಕಾಂತ್ ಸೇರಿದಂತೆ ಹಲವಾರು ನಟರ ಅದ್ದೂರಿ ಸಿನೆಮಾಗಳನ್ನು ಬಿಡುಗಡೆಗೂ ಮುಂಚೆ ಈ ಕುಟುಂಬದವರಿಗೆಂದೇ ಒಂದು ಪ್ರದರ್ಶನ ಏರ್ಪಾಡು ಮಾಡಿದ್ದರೆಂದು ಪತ್ರಿಕೆಗಳಲ್ಲಿ ಓದಿದ್ದೇನೆ. ಡಬ್ಬಿಂಗ್ ವಿರೋಧಿಸಿ ಕನ್ನಡಿಗರಿಗೆ ಓಳ್ಳೆಯ ಸಿನೆಮಾಗಳನ್ನು ನೋಡದಂತೆ ಮಾಡಿರೋ ಜನ ತಾವು ಮಾತ್ರ ಆ ಒಳ್ಳೆಯ ಸಿನೆಮಾಗಳನ್ನು ನೋಡೋದನ್ನ ಮಾತ್ರ ಮರೆತಿಲ್ಲ.

ಡಬ್ಬಿಂಗ್ ನಿಂದ ಕನ್ನಡದ ಸಂಸ್ಕೃತಿ ಹಾಳಾಗುತ್ತೆ ಅನ್ನೋ ಜನ ಅದೇ ಕನ್ನಡದ ಚಿತ್ರಗಳನ್ನ ಪರಭಾಷೆಗೆ ಡಬ್ ಮಾಡಿದಾಗ, ತಮ್ಮ ಮಾತನ್ನ ತಾವೇ ಮರೆತುಹೋಗುತ್ತಾರೆ. ನಿಜವಾಗಿಯೂ ಪರಭಾಷೆಯ ಚಿತ್ರಗಳು ಕನ್ನಡಕ್ಕೆ ಡಬ್ ಆದರೆ ಕನ್ನಡದ ಸಂಸ್ಕೃತಿ ಹಾಳಾಗೋದಾದ್ರೆ, ಕನ್ನಡ ಚಿತ್ರ ಬೇರೆ ಭಾಷೆಗೆ ಡಬ್ ಆದಾಗ ಆ ಭಾಷೆಯ ಸಂಸ್ಕೃತಿ ಹಾಳಾಗೋದಿಲ್ವ?

ಡಬ್ಬಿಂಗ್ ನಿಂದ ತೊಂದರೆಗೆ ಒಳಗಾಗೋರು ಒಬ್ರೆ, ಅವ್ರು talent ಇಲ್ಲದೇ ಪರಭಾಷೆಯ ಚಿತ್ರಗಳನ್ನ ಬಟ್ಟಿ ಇಳಿಸಿ ಇದಕ್ಕೆ ಇನ್ಯಾವುದನ್ನೋ ಸೇರಿಸಿ ಕಲೆಸಿ/ಬೆರೆಸಿ ರೀಮೇಕ್ ಮಾಡೋ ಜನ ಮಾತ್ರ. ಕನ್ನಡ ಚಿತ್ರರಂಗದಲ್ಲಿರೋ ನಿಜವಾದ talent ಗಳಿಗೆ ಡಬ್ಬಿಂಗ್ ಅಲ್ಲ, ಇನ್ಯಾವುದೋ ಒಂದು ಬೇರೆ ಗ್ರಹದಿಂದ ಇಳಿದು ಬಂದ್ರು ತೊಂದರೆ ಆಗಲ್ಲ. ಡಬ್ಬಿಂಗ್ ಕನ್ನಡ ಚಿತ್ರ ರಂಗನ ಜರಡಿ ಆಡಿ ಇಲ್ಲಿ talent ಇರೋರು ಮಾತ್ರ ಉಳಿಯೋ ಹಾಗೆ ಮಾಡುತ್ತೆ.

ಡಬ್ಬಿಂಗ್ ವಿರೋಧಿಸೋರು ಕನ್ನಡ...ಕನ್ನಡ.....ಅಂತ ಮುಂದೆ ಹೇಳಿ ಹಿಂದೆ ಪರಭಾಷೆಯ ಚಿತ್ರಗಳಿಗೆ ಕರ್ನಾಟಕದಲ್ಲಿ ಮಾರುಕಟ್ಟೆ ನಿರ್ಮಾಣ ಮಾಡೊಕ್ಕೆ ಹೊರಟು, ಪರಭಾಷೆಯ ಚಿತ್ರರಂಗದ ಏಜೆಂಟ್ಗಳಂತೆ ಆಡ್ತಿರೋದು ಬಹಳ ಆತಂಕಕಾರಿ. ಡಬ್ಬಿಂಗ್ ಗೆ ವಿರೋಧಿಸೋ ಜನ ಪರಬಾಷೆ ಚಿತ್ರ ಕರ್ನಾಟಕದಲ್ಲಿ ಹೆಚ್ಚು ಹೆಚ್ಚು ಕಡೆ ಬಿಡುಗಡೆ ಆಗ್ತಿರೋ ಬಗ್ಗೆ ಯಾಕೆ ಮಾತಾಡ್ತಿಲ್ಲ ಅಥವಾ ಅದಕ್ಕೆ ಪರಹಾರ ಯಾಕೆ ಹುಡುಕ್ತಿಲ್ಲ? ಇದರಿಂದ ನಿಜವಾಗಿಯೂ ಇವರಿಗೆ ಕನ್ನಡದ ಬಗ್ಗೆ ಕಾಳಜಿ ಇದ್ಯ ಅನ್ನೋದೇ ಒಂದು ಪ್ರಶ್ನೆಯಾಗಿದೆ. ಇವರು ಡಬ್ಬಿಂಗ್ ವಿರೋಧಿಸುತ್ತಿರೋದು ತಮ್ಮ ಬೇಳೆ ಬೇಯಿಸಿಕೊಳ್ಳೋಕ್ಕೆ ಹೊರೆತು ಕನ್ನಡಕ್ಕಾಗಿ ಅಲ್ಲ.


ಡಬ್ಬಿಂಗ್ ನಿಂದ ಅದು ಹಾಳಾಗುತ್ತೆ ಇದು ಹಾಳಾಗುತ್ತೆ ಅಂತ ತಮ್ಮ ಬೇಳೆ ಬೇಯಿಸಿಕೊಳ್ಳೊಕ್ಕೆ ಹೊರಟಿರೋ ಜನರ ಮಾತನ್ನ ತಲೆಗೆ ಹಾಕಿಕೊಳ್ಳಬೇಡಿ. ಅದೇ ಜನ ನಾಳೆ ಕಾಫಿ ಶಾಪ್ ಚಿತ್ರ ತೆಲುಗುಭಾಷೆನಲ್ಲಿ ಬಿಡುಗಡೆ ಆದ್ರೆ first day first show ನಲ್ಲಿ ನೋಡ್ತಾರೆ. ಕಾಫಿ ಶಾಪ್ ಚಿತ್ರ ಕನ್ನಡದಲ್ಲಿ ಬಂದ್ರೆ ಒಳ್ಳೆದೇ ಅಲ್ವ? ಸುಮ್ನೆ ಕಾಫಿ ಶಾಪ್ ಚಿತ್ರ ಕನ್ನಡಕ್ಕೆ ಡಬ್ ಆಗೋದನ್ನ ಬೆಂಬಲಿಸಿ. ಬಿಡುಗಡೆ ಆದ್ಮೇಲೆ ಆರಾಮಾಗಿ ಮಲ್ಟಿಪ್ಲೆಕ್ಸ್ ನಲ್ಲಿ ಹೋಗಿ ಕನ್ನಡದಲ್ಲೇ ಸಿನೆಮಾ ನೋಡಿ ಮಜ ಮಾಡಿ.

9 ಕಾಮೆಂಟ್‌ಗಳು:

  1. Since this stops us from getting entertainment in our language, Can we as a movie-goer, file a complaint against KFCC in consumer court??

    ಪ್ರತ್ಯುತ್ತರಅಳಿಸಿ
  2. ಪಚ್ಚಿ ರವರೆ,

    ಸದ್ಯಕ್ಕೆ ಡಬ್ಬಿಂಗ್ ತಡೆಯುವಂತಹ ಯಾವುದೇ ಕಾನೂನು ಇಲ್ಲ. ಇದಕ್ಕೆ ಒಂದು ಪರಿಹಾರ ಎಂದ್ರೆ ಯಾರದ್ರು ಪ್ರಬಾವಿ ನಿರ್ಮಾಪಕ ಯಾರ ಮೂಲಜಿಗೂ ಸಿಲುಕದೆ, ಯಾರ ಬೆದರಿಕೆಗಳಿಗೂ ಜಗ್ಗದೆ ಸಿನೆಮಾ ಡಬ್ ಮಾಡಿ ಬಿಡುಗಡೆ ಮಾಡೋದು ಇದಕ್ಕೆ ಪ್ರೇಕ್ಷಕರಾದ ನಮ್ಮೆಲ್ಲರ ಸಹಕಾರ ಮುಕ್ಯ.

    ಕೊನೆಗೆ ಪ್ರೇಕ್ಷಕನಿಗೆ ಡಬ್ ಆದ ಸಿನೆಮಾ ಬೇಕು ಅನ್ನೊದು ಆದ್ರೆ ಯಾರದ್ರು ಒಬ್ಬ ನಿರ್ಮಾಪಕ ಮುಂದೆ ಬಂದೇ ಬರ್ತಾರೆ.

    ಪ್ರತ್ಯುತ್ತರಅಳಿಸಿ
  3. ಡಬ್ಬಿಂಗ್ ಬೇಡ ಬೇಡ ಅನ್ನೊರ ಜೊತೆಗೆ ಯಾವುದೇ ಕಾನೂನು ಇಲ್ಲ. ಇವರು ತಮ್ಮ ಸ್ವಾರ್ತಕ್ಕಾಗಿ ಬೆದರಿಕೆ ಹಾಕಿ ಡಬ್ ಸಿನೆಮಾಗಳನ್ನ ಬಿಡುಗಡೆ ಮಾಡೊಕ್ಕೆ ಬಿಡ್ತಿಲ್ಲ. ಪ್ರೇಕ್ಷಕರು ಇವರ ಬೆದರಿಕೆ ದೊಡ್ಡದ ಅತವಾ ಪ್ರೇಕ್ಷಕನ ಹಕ್ಕು ದೊಡ್ದದ ಅಂತ ಯೋಜನೆ ಮಾಡ್ಬೇಕು.

    ಪ್ರತ್ಯುತ್ತರಅಳಿಸಿ
  4. ನಮ್ಮ ಕನ್ನಡದ ಜಾಕಿ ಚಿತ್ರ ಇತ್ತೀಚಿಗೆ ತೆಲುಗಿಗೆ ಡಬ್ ಆಗಿದೆ. ಹೀಗೆ ಕನ್ನಡದ ಹಲವಾರು ಉತ್ತಮ ಚಿತ್ರಗಳು ತೆಲುಗು ಸೇರಿದಂತೆ ಕೆಲ ಭಾಷೆಗಳಿಗೆ ಡಬ್ ಆಗಿವೆ ಹಾಗು ಆಗುತ್ತಿವೆ. ಆಗೆಲ್ಲ ನಾವು ಕನ್ನಡಿಗರು ಒಂದು ಅವ್ಯಕ್ತ ಆನಂದ ಅನುಭವಿಸುತ್ತೇವೆ.....ಕನ್ನಡದ ಚಿತ್ರವೊಂದು ಬೇರೆ ಭಾಷೆಗೆ ಡಬ್ ಆದದ್ದು ನಮಗೆ ಹೆಮ್ಮೆಯ ವಿಷಯದಂತೆ ತೋರುತ್ತದೆ. ಆದರೆ ಬೇರೆ ಭಾಷೆಯ ಚಿತ್ರವನ್ನು ಕನ್ನಡದಲ್ಲಿ ಡಬ್ ಮಾಡುವುದು ಅಪರಾಧ ಎಂಬ ಮನೋಭಾವ ಎಷ್ಟು ಸರಿ? ಡಬ್ಬಿಂಗ್ ಮಾಡುವುದು ಸರಿಯಲ್ಲ ಎಂದು ಚಿತ್ರರಸಿಕನಿಗೆ ಅನ್ನಿಸಿದರೆ ಅದನ್ನು ಡಬ್ಬಾದಲ್ಲಿ ವಾಪಸ್ ಕಲಿಸುವ ಕಲೆ ಕನ್ನಡ ಪ್ರೇಕ್ಷಕನಿಗೆ ಗೊತ್ತಿದೆ. ಸುಮ್ಮನೆ ಕಾಲೆಳೆಯಬೇಡಿ.

    ಪ್ರತ್ಯುತ್ತರಅಳಿಸಿ
  5. ಪ್ರಿಯ ಅರುಣ್ ರವರೆ,
    ನಿಮ್ಮ ಮಾತುಗಳಿಗೆ ನನ್ನ ಸಂಪೂರ್ಣ ಸಹಮತವಿದೆ, ಇದೇ ರೀತಿ ಡಬ್ಬಿಂಗ್ ಅನ್ನು ವಿರೋಧಿಸಿ ಕಳೆದ ಸಾಹಿತ್ಯ ಸಮ್ಮೇಳನದಲ್ಲಿ ತೆಗೆದುಕೊಂಡ ನಿರ್ಣಯವನ್ನು ಖಂಡಿಸಿ ಇದೇ ಮಾರ್ಚ್ ೬ ೨೦೧೧ ರಲ್ಲಿ ಬರೆದ ನನ್ನ ಲೇಖನದ ಲಿಂಕ್ ಇಲ್ಲಿದೆ http://bidarakote.blogspot.com/2011/03/blog-post.html
    ಓದಿ ನಿಮ್ಮ ಅಭಿಪ್ರಾಯ ತಿಳಿಸಿ
    ನಿಮ್ಮ
    ಉಮಾಶಂಕರ

    ಪ್ರತ್ಯುತ್ತರಅಳಿಸಿ
  6. ಉತ್ತಮ ಲೇಖನ ಅರುಣರವರೆ, ಡಬ್ಬಿಂಗ್ ಚಿತ್ರಗಳಿಗೆ ನನ್ನ ಸಹಮತ ...........

    ಪ್ರತ್ಯುತ್ತರಅಳಿಸಿ
  7. ಅರುಣ್ ಲೇಖನ ಚನ್ನಾಗಿದೆ , ನಾನು ಕೂಡ ಒಪ್ಪುತ್ತೇನೆ.
    ಆದರೆ ನೀವು ಮಾತನಾಡಿರುವುದು ನಾಣ್ಯದ ಒಂದು ಮುಖ ಮಾತ್ರ.
    ಸಿನಿಮಾ ಒಂದು ಕೈಗಾರಿಕೋದ್ಯಮ , ಹೆಚ್ಚು ಜನ ಇದನ್ನೇ ನಂಬಿ ಕೆಲಸ ಮಾಡುತ್ತಿದ್ದಾರೆ.ಒಂದು ವೇಳೆ ಪರಭಾಷಾ ಚಿತ್ರಗಳೆಲ್ಲಾ ಡಬ್ ಆದ್ರೆ ಏನಾಗಬಹುದು ? ನಮ್ಮ ಕನ್ನಡ ನಟರು , ತಂತ್ರಜ್ಞರು ಏನಾಗಬಹುದು ? ಇಂದು ನಾವು ಕೇವಲ ಒಂದು ಚಿತ್ರ ಡಬ್ ಮಾಡಿದರೆ,ಬರಬರುತ್ತಾ ಎಲ್ಲಾ ಚಿತ್ರಗಳು ಡಬ್ ಆಗಿಬಿಡುತ್ತದೆ, ಹೀಗಾದರೆ ನಮ್ಮ ನಟರು ತೆಲಗು ತಮಿಳ್ ಕಲಿಯಬೇಕಾಗುತ್ತದೆಚಾನ್ಸ್ ಗಾಗಿ , ಕನ್ನಡ ಕಲೆಯುವ ಜ್ಯೋತೆ ತಮಿಳ್ ತೆಲಗು ಆಕ್ಟಿಂಗ್ ಸ್ಕೂಲ್ ಶುರುವಾಗಿಬಿಡುತ್ತವೆ.ನನ್ನ ಪ್ರಕಾರ , ಡಬ್ ಎಂಥ ಚಿತ್ರಗಳನ್ನು ಮಾಡ ಬೇಕೆಂದರೆ, ಯಾವ ಚಿತ್ರವನ್ನು ನಮ್ಮ ಚಿತ್ರರಂಗ ಪುನರ್ ನಿರ್ಮಾಣ ಮಾಡಲು ಅಸಮರ್ಥರೋ ! ಅಂತ ಚಿತ್ರಗಳು ಡಬ್ ಆಗಬೇಕು , ಉದಾಹರಣೆ spiderman,Avtaar, Tom and jerry. --- laxman shivashankar

    ಪ್ರತ್ಯುತ್ತರಅಳಿಸಿ