ಸೋಮವಾರ, ಸೆಪ್ಟೆಂಬರ್ 5, 2011

ಹಿಂದಿ ಹೇರಿಕೆಗೆ ದಿಕ್ಕಾರ ಎನ್ನೋಣ


ಬಾರತ ಬಾಶಾ ವೈವಿದ್ಯತೆಗಳಿಂದ ಕೂಡಿದ ದೇಶ. ಇಲ್ಲಿ ಎಲ್ಲಾ ಬಾಶೆಗಳಿಗೂ ತನ್ನದೇ ಆದ ವೈಶಿಶ್ಟಗಳಿವೆ. ಆದರೆ ಈ ವೈವಿದ್ಯತೆಯನ್ನ ಅರಿಯದ ಕೆಲವರು ಹಿಂದಿಯನ್ನ ರಾಶ್ಟ್ರಬಾಶೆಯನ್ನಾಗಿಸಲು ಹಲವಾರು ಬಾರಿ ಪ್ರಯತ್ನ ನಡೆಸಿದ್ದರು, ಈ ಸಮಯದಲ್ಲಿ ಹಿಂದಿಯೇತರರಿಂದ ಬಂದ ವಿರೋದದಿಂದ ಅವರ ಪ್ರಯತ್ನ ವಿಪಲವಾಗಿದೆ.

ಹಿಂದಿ ಬಾಶೆಯನ್ನ ಹಿಂದಿಯೇತರರ ಮೇಲೆ ಹೇರುವ ಉದ್ದೇಶದಿಂದ, ಸೆಪ್ಟೆಂಬರ್ ೧೪, ೧೯೪೯ರಂದು ಬಾರತದ ಸಂವಿದಾನದಲ್ಲಿ ಹಿಂದಿ ಬಾಶೆಗೆ ಆಡಳಿತ ಬಾಶೆ ಎನ್ನುವ ಸ್ತಾನ ನೀಡಿಲಾಗಿದ್ದು ,ಅಂದಿನಿಂದ ಇಂದಿನವರೆಗೂ ಆಡಳಿತ ಬಾಶೆಯ ಹೆಸರಿನಲ್ಲಿ ಹಿಂದಿಯೇತರರ ಮೇಲೆ ಹಿಂದಿ ಬಾಶೆಯ ಹೇರಿಕೆ ನಿರಂತರವಾಗಿ ನಡೆಯುತ್ತಾ ಬಂದಿದೆ. ಈ ಹಿಂದಿ ಹೇರಿಕೆಯ ಪರಿಣಾಮವಾಗಿ ಸರಕಾರದ ಸವಲತ್ತುಗಳಿಂದ ಹಿಡಿದು ಉದ್ಯೋಗದ ವರೆಗೆ ಹಿಂದಿ ಬಾಶೆಯನ್ನಾಡುವ ಜನರು ಮಾತ್ರ ಉಪಯೋಗ ಪಡೆದುಕೊಂಡು, ಹಿಂದಿಯೇತರರು ವಂಚನೆಗೆ ಗುರಿಯಾಗುತ್ತಿದ್ದಾರೆ ಮತ್ತು ಸರಕಾರ ಹಿಂದಿ ಬಾಶೆಗೆ ಪ್ರಾಮುಕ್ಯತೆ ದೊರೆಕಿಸಿ ಕೊಡಲು ಟೊಂಕ ಕಟ್ಟಿ ನಿಂತಿರುವುದರಿಂದ. ಇತರೇ ಬಾಶೆಗೆ ಮತ್ತು ಆ ಬಾಶೆಯನ್ನಾಡುವ ಜನರಿಗೆ ಅನ್ಯಾಯದ ಸರಮಾಲೆಗಳೇ ಸಿಗುತ್ತಿದೆ.

ಕೇಂದ್ರಸರ್ಕಾರದ ಎಲ್ಲಾ ಕಚೇರಿಗಳಲ್ಲಿ ಪ್ರತಿವರ್ಶ ಹಿಂದಿಯನ್ನ ಆಡಳಿತ ಬಾಶೆಯನ್ನಾಗಿ ಮಾಡಿದ ದಿನವನ್ನ(ಸೆಪ್ಟೆಂಬರ್ ೧೪) ಹಿಂದೀ ದಿವಸ್ ಎಂಬ ಹೆಸರಲ್ಲಿ ವೈಭವದ ಹಬ್ಬವಾಗಿ ಆಚರಿಸಲಾಗುತ್ತದೆ. ಈ ದಿನವನ್ನ ಹಿಂದಿಯೇತರರಿಗೆ ಆಮಿಶಗಳನ್ನ ಒಡ್ಡಿ ಹಿಂದಿ ಹೇರಿಕೆಗೆ ತಲೆಬಾಗುವಂತೆ ಮಾಡಲು ಬಳಸಿಕೊಳ್ಳಲಾಗುತ್ತಿದೆ. ಇದು ಮಾರಕವಾಗಿದೆ.

ಹಿಂದಿ ಬಾಶೆಯನ್ನ ಹಿಂದಿಯೇತರರ ಮೇಲೆ ಹೇರುತ್ತಿರುವ ಹೀನ ಕ್ರುತ್ಯವನ್ನ ಒಟ್ಟಾಗಿ ಕಂಡಿಸೋಣ. ಬಾರತದ ಬಾಶಾ ವೈವಿದ್ಯತೆಯನ್ನ ಕಾಪಾಡೋಣ. ಸೆಪ್ಟೆಂಬರ್ ೧೪ ರಂದು ನಡೆಸುವ ಹಿಂದಿ ಹೇರಿಕೆ/ಹಿಂದಿ ದಿವಸ್ ಗೆ ದಿಕ್ಕಾರ ಎನ್ನೊಣ!!

ಕೊನೆಯದಾಗಿ: ಹಿಂದಿ ಹೇರಿಕೆಯ ಬಗ್ಗೆ ಬನವಾಸಿ ಬಳಗದ ಆನಂದ್ ರವರು ಬರೆದಿರುವ "ಹಿಂದೀ ಹೇರಿಕೆ - ಮೂರು ಮಂತ್ರ: ನೂರು ತಂತ್ರ" ಎನ್ನುವ ಅಪರೂಪದ ಮಾಹಿತಿಗಳ ಹೊತ್ತಗೆಯೊಂದನ್ನು ಸೆಪ್ಟೆಂಬರ್ ೧೦ ೨೦೧೧ ರ ಶನಿವಾರ ಬೆಳಿಗ್ಗೆ ೧೦:೩೦ ಗಂಟೆಗೆ ಬೆಂಗಳೂರಿನ ನಯನ ಸಬಾಂಗಣದಲ್ಲಿ ಬಿಡುಗಡೆ ಮಾಡಲಾಗುತ್ತದೆ.ಆಸಕ್ತರು ಈ ಕಾರ್ಯಕ್ರಮದಲ್ಲಿ ಬಾಗವಹಿಸಿ, ಹಿಂದಿ ಹೇರಿಕೆಯ ಬಗ್ಗೆ ಹೆಚ್ಚಿನ ವಿಶಯಗಳನ್ನ ತಿಳಿಯಬಹುದು.

3 ಕಾಮೆಂಟ್‌ಗಳು:

  1. "ಬಾಶೆ" ಅಲ್ಲ ಗುರುವೇ, "ಭಾಶೆ" ಬರಿ ಬೇಕು. "ಕ್ರುತ್ಯ" ಅಲ್ಲ, "ಕೃತ್ಯ".

    - ನಿಮ್ಮ ಹಿಂದೀ'ಬಾಶಿ" ಓದುಗರ

    ಪ್ರತ್ಯುತ್ತರಅಳಿಸಿ
  2. ಇದೇ ಸಂದರ್ಬದಲ್ಲಿ ಇನ್ನೊಂದು ಮುಕ್ಯ ವಿಶಯವೆಂದರೆ ಬಾರತ ರಾಶ್ಟ್ರದ ವಿವಿದ ಬಾಶೆಗಳ ವೈಬವದ ಸ್ತಾನಕ್ಕೆ ದಕ್ಕೆ ತರುವ ಮಹಾಪ್ರಾಣದ ಏರಿಕೆಯನ್ನೂ‌ ವಿರೋದಿಸಿ ಇದನ್ನು ಕಡಾಕಂಡಿತವಾಗಿ ಕಂಡಿಸಿ ಈನಕ್ರುತ್ಯ ಎನ್-ನೊಣ. ಹಿಗೆ ದಿರ್ಗಸ್ವರಗಳನ್ನು ಕುಡ ವಿರೊದಿಸಬೆಕು.

    ಪ್ರತ್ಯುತ್ತರಅಳಿಸಿ