ನಾವುಗಳು ಬ್ಯಾಂಕುಗಳಿಗೆ ಹೋದಾಗ ದುಡ್ಡು ತೆಗೆಯಲು/ತುಂಬಲು ಚಲನ್ ಬರೆದುಕೊಡಿ ಎಂದು ಸಹಾಯ ಕೇಳುವ ಪ್ರಸಂಗಗಳನ್ನು ಗಮನಿಸಬಹುದು. ಇದೇ ಪ್ರಸಂಗ ಏಟಿಎಂಗಳಲ್ಲೂ ಸಾಮಾನ್ಯವಾಗಿದೆ. ಬ್ಯಾಂಕುಗಳು ಆಯಾ ರಾಜ್ಯದ ಭಾಷೆಯಲ್ಲಿ ವ್ಯವಹರಿಸಬೇಕೆನ್ನುವ ನಿಯಮವಿದ್ದರೂ ಈ ನಿಯಮಗಳ ಅರಿವಿಲ್ಲದೆ ವಿದ್ಯಾವಂತರಾಗಿದ್ದರೂ ಸಹ ಅವಿದ್ಯಾವಂತರಾಗುವ ಹಾಗೆ ಆಗಿದೆ. ಬ್ಯಾಂಕುಗಳು ಜನರ ಭಾಷೆಯಲ್ಲಿ ವ್ಯವಹರಿಸಬೇಕೆನ್ನುವಂತೆ ರೂಪಿಸಿರುವ ನಿಯಮಗಳ ಬಗ್ಗೆ ಅರಿವು ಮೂಡಿಸುವುದು ಬ್ಯಾಂಕಿನ ವ್ಯವಹಾರದಲ್ಲಿ ಪಾರದರ್ಶಕತೆ ಸಾಧಿಸುವಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ.
ಭಾರತದಲ್ಲಿ ಕಾರ್ಯನಿರ್ವಹಿಸುವ ಪ್ರತಿಯೊಂದು ಬ್ಯಾಂಕುಗಳು ಭಾರತೀಯ ರಿಸರ್ವ್ ಬ್ಯಾಂಕಿನ
(RBI) ನಿಯಮಗಳಿಗೆ ಒಳಪಟ್ಟಿರುತ್ತವೆ. RBI.ಬ್ಯಾಂಕಿನ ವಹಿವಾಟುಗಳು ಸರಿಯಾಗಿ ಮತ್ತು
ಸುಗಮವಾಗಿ ನಡೆಯಲೆಂದು ಮತ್ತು ಗ್ರಾಹಕರ ಹಿತ ಕಾಯಲೆಂದು ಹಲವು ನಿಯಮಗಳನ್ನು ರೂಪಿಸಿದೆ.ಈ ನಿಯಮಗಳಿಗೆ ಎಲ್ಲಾ ಖಾಸಗೀ ಮತ್ತು ರಾಷ್ಟ್ರೀಕೃತ ಬ್ಯಾಂಕುಗಳು ಬದ್ದವಾಗಿರಬೇಕು. RBI ನಿಯಮ ರೂಪಿಸುವುದರ ಜೊತೆಗೆ ಬ್ಯಾಂಕುಗಳು ನಿಯಮಗಳಿಗೆ ಬದ್ದವಾಗಿ ನಡೆದುಕೊಳ್ಳುತ್ತಿವೆಯೆ
ಎನ್ನುವುದಕ್ಕೆ ಕಣ್ಗಾವಲು ಇಟ್ಟಿರುತ್ತದೆ.
RBIನ ಮಾಸ್ಟರ್ ಸರ್ಕ್ಯುಲೇಶನ್ ಆನ್ ಕಸ್ಟಮರ್ ಸರ್ವಿಸ್ ಇನ್ ಬ್ಯಾಂಕ್ಸ್ (Master
Circular on Customer Service in
Banks<http://www.rbi.org.in/scripts/BS_ViewMasterCirculars.aspx?Id=7363&Mode=0>)
ಎನ್ನುವ ನಿಯಮಾವಳಿಯು ಗ್ರಾಹಕರ ಹಿತ ಕಾಪಾಡುವಲ್ಲಿ ಬಹುಮುಖ್ಯ ಪಾತ್ರವಹಿಸುತ್ತದೆ. ಈ
ನಿಯಮಾವಳಿಯಲ್ಲಿ ಗ್ರಾಹಕರ ಪ್ರತಿನಿತ್ಯದ ವಹಿವಾಟುಗಳಲ್ಲಿ ಉಪಯೋಗವಾಗುವಂತಹಾ ಹಲವು ಅಂಶಗಳಿವೆ.ಇದರಲ್ಲಿ ಬ್ಯಾಂಕುಗಳು ಆಯಾ ರಾಜ್ಯದ ಭಾಷೆಯಲ್ಲಿ ವ್ಯವಹಸಬೇಕು ಎನ್ನುವಂತಹಾ ಪ್ರಮುಖವಾದ ಅಂಶಗಳಿವೆ. ಈ ನಿಯಮದಲ್ಲಿ ಹೇಳಿರುವಂತೆ ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಉಪಯೋಗವಾಗಲು ಚಲನ್ ಗಳು, ಖಾತೆ ತೆರೆಯುವ/ ಮುಚ್ಚುವ ಅರ್ಜಿಗಳು ಸೇರಿದಂತೆ ಇನ್ನಿತರೇ ಎಲ್ಲಾ ರೀತಿಯ ಮುದ್ರಿತ ಅರ್ಜಿಗಳನ್ನು ಆಯಾ ರಾಜ್ಯದ ಭಾಷೆಯಲ್ಲಿ ಒದಗಿಸಬೇಕು ಜೊತೆಗೆ ಚೆಕ್ ಗಳು ಮತ್ತು ಚಲನ್ ಗಳನ್ನು ಆಯಾ ರಾಜ್ಯದ ಭಾಷೆಯಲ್ಲಿ ಬರೆಯುವ ಅವಕಾಶ ಗ್ರಾಹಕರ ಹಕ್ಕಾಗಿದೆ, ಒಟ್ಟಾರೆ ಎಲ್ಲಾ ರೀತಿಯ ಗ್ರಾಹಕ ಸೇವೆಗಳನ್ನು ಆಯಾ ರಾಜ್ಯದ ಭಾಷೆಯಲ್ಲಿ ಒದಗಿಸುವುದು ಪ್ರತಿಯೊಂದು ಬ್ಯಾಂಕಿನ ಕರ್ತವ್ಯವಾಗಿದೆ. ಅಂದರೆ ಕರ್ನಾಟಕದಲ್ಲಿ ಕನ್ನಡದಲ್ಲಿ ಗ್ರಾಹಕ ಸೇವೆ ನೀಡುವುದು ಕರ್ನಾಟಕದಲ್ಲಿ ಕಾರ್ಯನಿರ್ವಹಿಸುವ ಪ್ರತಿಯೋಂದು ಬ್ಯಾಂಕಿನ ಕರ್ತವ್ಯವಾಗಿದೆ.
ಮೇಲೆ ಹೇಳಿದೆ RBI ನ ನಿಯಮಾನುಸಾರ ಜನರು ಯಾವುದೇ ಅಡೆತಡೆಯಿಲ್ಲದೇ ಕರ್ನಾಟಕದಲ್ಲಿ
ಕನ್ನಡದಲ್ಲೇ ಬ್ಯಾಂಕಿನೊಂದಿಗೆ ವ್ಯವಹರಿಸಬಹುದು. ಕರ್ನಾಟಕದಲ್ಲಿ ಯಾವುದಾರರೂ
ಬ್ಯಾಂಕಿನಲ್ಲಿ ಕನ್ನಡದಲ್ಲಿ ವ್ಯವಹರಿಸಲು ಅವಕಾಶ ಕಲ್ಪಿಸದಿದ್ದರೆ ಅಥವಾ ಕನ್ನಡದಲ್ಲಿ
ಗ್ರಾಹಕ ಸೇವೆ ನೀಡದಿದ್ದರೆ ಅದು RBi ನಿಯಮದ ಉಲ್ಲಂಘನೆಯಾಗುವುದು, ಈ ಬಗ್ಗೆ ಆಯಾ ಬ್ಯಾಂಕಿನ ಮೇಲಿನ ಅಧಿಕಾರಿಗಳಿಗೆ ದೂರು ನೀಡುವುದರ ಜೊತೆಗೆ ನಿಯಮ ಉಲ್ಲಂಘನೆಯ ಬಗ್ಗೆ RBI ನ ಗಮನಕ್ಕೇ ಕೂಡ ತರಬಹುದಾಗಿದೆ.
ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರೂ ಸಹ ಮಾತನಾಡಿದ್ದು, ಬ್ಯಾಂಕುಗಳ ಸಮಿತಿ ಸಭೆಯಲ್ಲಿ ಕನ್ನಡದಲ್ಲಿ ಗ್ರಾಹಕ ಸೇವೆ ನೀಡಬೇಕೆಂದು ಬ್ಯಾಂಕುಗಳಿಗೆ ತಾಕೀತು ಮಾಡಿದ್ದಾರೆ
ಹೌದು....ಇಂದು ನಾನು ಬ್ಯಾಂಕಿನಲ್ಲಿ "ನನ್ನಮ್ಮ ನಿಧನರಾಗಿದ್ದಾರೆ...." ಎನ್ನುವ ಘೋಷಣಾ ಪತ್ರವನ್ನು ಕನ್ನಡದಲ್ಲೇ ಬರೆದು ಕೊಟ್ಟೆ..... ಪಾಪ ಅಧಿಕಾರಿ ಒಬ್ಬಳು ಮಲೆಯಾಳಿ ಹುಡುಗಿ....ಹೊಸದಾಗಿ ಬಂದವಳು....ಕನ್ನಡ ಗೊತ್ತಿಲ್ಲ....ಮಲೆಯಾಳದಲ್ಲಿ .... "ಇದೇನು.....?? ನನಗೆ ಅರ್ಥವೇ ಆಗುವುದಿಲ್ಲ.... ನೀವು ನಮ್ಮ ಬ್ಯಾಂಕಿನ ನಿವೃತ್ತ ಉದ್ಯೋಗಿ....ನಿಮ್ಮನ್ನು ನಂಬ್ತೇನೆ...." ಅಂದಳು.... ಓ...ಇಷ್ಟರ ಮಟ್ಟಿಗೆ ನನ್ನನ್ನು ನಂಬಬಹುದು.... ಎಂದು ಕನ್ನಡದಲ್ಲೇ ಉತ್ತರ ಕೊಟ್ಟೆ....ಅರ್ಥವಾದಂತೆ ನಕ್ಕು ತಲೆಯಾಡಿಸಿದಳು ...... -ಮೂರ್ತಿ ದೇರಾಜೆ
ಪ್ರತ್ಯುತ್ತರಅಳಿಸಿ