ಆದರೆ ಸರಕಾರ ಈ ಜಾಹಿರಾತು ನೀಡೋ ವಿಶಯದಲ್ಲೂ ತಾರತಮ್ಯ ಮಾಡಿ ತನ್ನ ಕಾರ್ಯ/ ಸೌಲಬ್ಯ ಗಳು ಕನ್ನಡಿಗರಿಗೆ ಸಿಗಬಾರ್ದು ಅನ್ನೊ ತರ ನಡೆದುಕೊಳ್ತಿರೋದು ಮಾತ್ರ ನಿಗೂಡ! ಇದೋ ಹೀಗೆ ಅಂತೀರ- ಕನ್ನಡ ಪತ್ರಿಕೆಗಳಲ್ಲಿ ಕನ್ನಡವಲ್ಲದ, ಕನ್ನಡಿಗರಿಗೆ ಅರಿವಿಲ್ಲದ ಹಿಂದಿ ಬಾಶೆಯಲ್ಲಿ ಜಾಹಿರಾತು ನೀಡೋದು.
ಈ ಕೆಲ್ಸವನ್ನ ಸರಕಾರ ಬಹಳ ವ್ಯವಸ್ತಿತವಾಗಿ ಮಾಡ್ತಿದೆ. ಇದರ ಕೆಲವು ಕೆಲವು ಸ್ಯಾಂಪಲ್ ಗಳು-
೧. ಕೆಲವು ವರ್ಶಗಳ ಹಿಂದೆ ನೈರುತ್ಯ ರೈಲ್ವೆ ,ಡಿ ದರ್ಜೆ ನೌಕರರಿಗೆ(೭ ಅತವಾ ೮ ನೇ ತರಗತಿ ಪಾಸಾದವರಿಗೆ) ಅರ್ಜೆಗೆ ಅಹ್ವಾನಿಸಿ, ಕನ್ನಡವಲ್ಲದ ಬಾಶೆಯಲ್ಲಿ ಯಾವುದೋ ಒಂದೆರಡು ಚಿಕ್ಕ ಪತ್ರಿಕೆಗಳಲ್ಲಿ ಜಾಹಿರಾತು ನೀಡಿತ್ತಂತೆ. ಆ ಜಾಹಿರಾತು ಓದೋಕ್ಕೆ ಆಗದ ಕನ್ನಡದವರು ಅರ್ಜಿ ಹಾಕಿದ್ದೆ ಕಡಿಮೆ ಜನ. ಎಂತಾ ದುರಂತ.
೨. ಸ್ವಲ್ಪ ದಿನಗಳ ಹಿಂದೆ ವಿಕ ನಲ್ಲಿ, ರೈಲ್ವೆಯಲ್ಲಿ ಪ್ರಯಣಿಕರ ಸುರಕ್ಷತೆಯ ಅರಿವಿಗಾಗಿ ನೀಡೋ ಜಾಹಿರಾತು ಹಿಂದಿಯಲ್ಲಿ ಇತ್ತು. ಏನಪ್ಪ ಕನ್ನಡಿಗರ ಸುರಕ್ಷತೆ ಸರಕಾರಕ್ಕೆ ಬೇಡ್ವ?

೩. ಮಿನಿಸ್ಟ್ರಿ ಆಫ್ ಓವರ‍್ಸೀಸ್ ಇಂಡಿಯನ್ ಅಫೇರ್ಸ್ ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಹಿಂದಿ ಬಾಶೆಯ ವಾಕ್ಯವನ್ನ ಕನ್ನಡ ಲಿಪಿನಲ್ಲಿ ಬರೆದು ಜಾಹಿರಾತು ಹಾಕಿದೆ. ಇದು ಕಾಟಾಚಾರಕ್ಕೆ ಹಾಕಿರೋದೇ ಅಲ್ವ? ಜಾಹಿರಾತು ಕೊಟ್ಟಂಗು ಇರ್ಬೇಕು, ಕೊಡದೇ ಇರೋ ಹಾಗೂ ಇರಬೇಕು. ನಮ್ ದುಡ್ಡು , ಹಿಂದಿ ಜಾತ್ರೆ.

೪. ಮೊನ್ನೆ ಮತ್ತೆ ರೈಲ್ವೆ , ವಿಕ ನಲ್ಲಿ ಜಾಹಿರಾತು ನೀಡಿದೆ. ದೇವರಾಣೆ ಯಾಕೆ ಅಂತ ನನಗಂತೂ ಗೊತ್ತಾಗ್ಲಿಲ್ಲ.
ಇವು ಬರಿ ಸ್ಯಾಂಪಲ್ ಗಳು ಅಶ್ಟೆ! ಕನ್ನಡ ಪತ್ರಿಕೆಗಳಲ್ಲಿ ಹಿಂದಿ ಜಾಹಿರಾತುಗಳ ಸುರಿಮಳೆನೇ ಆಗ್ತಿದೆ.
ಹಿಂದಿ ಗೊತ್ತಿರೋರಿಗೆ ಮಾತ್ರ ಸೌಲಬ್ಯಗಳು ಸಿಕ್ಲಿ
ಈ ಮೇಲಿನವು ಕನ್ನಡಿಗರ ಅತವಾ ಹಿಂದಿಯೇತರರ ಮೇಲೆ ನಡೆಯುತ್ತಿರೋ ಹಿಂದಿ ಹೇರಿಕೆ ಬೂತದ ಕೈಚಳಕ. ಮತ್ತೆ ಮತ್ತೆ ಕನ್ನಡಪತ್ರಿಕೆಗಳಲ್ಲಿ ಹಿಂದಿಯಲ್ಲಿ ಜಾಹಿರಾತು ನೀಡ್ತಿರೋದನ್ನ ನೋಡಿದ್ರೆ, ಇವು ಏನೋ ಗೊತ್ತಿಲ್ಲದೇ ಆಗಿರೋ ತಪ್ಪ್ಪು ಅಂತ ಅನ್ನಿಸಲ್ಲ, ಈ ಕೆಲ್ಸ ಬಹಳ ವ್ಯವಸ್ತಿತವಾಗಿ ನಡಿತಿದೆ ಅನ್ನೋದಂತು ಡೆಪೆನೆಟ್ ಆಗಿ ಹೇಳ್ಬಹುದು. ಮತ್ತ್ತೆ.. ಈ ಜಾಹಿರಾತುಗಳನ್ನ ನೋಡಿದ್ರೆ, ಹಿಂದಿ ಗೊತ್ತಿರೋರಿಗೆ ಮಾತ್ರ ಸೌಲಬ್ಯಗಳು ಸಿಕ್ಲಿ. ಅನ್ನೊ ಸಂದೇಶ ಎದ್ದು ಕಾಣಿಸ್ತಿದೆ, ಈ ಸಂದೇಶ ನಿಜಕ್ಕೂ ಆತಂಕ ಹುಟ್ಟಿಸ್ತಿದೆ.
ಹಿಂದಿಯೇತರರೂ ಸೌಲಬ್ಯಗಳ ಅನುಕೂಲ ಪಡೆಯೋಕ್ಕೆ ಹಿಂದಿ ಗೊತ್ತಿರುವವರಶ್ಟೇ ಅಹ೯ರು
ಪ್ರಜಾಪ್ರಬುತ್ವದಲ್ಲಿ ಎಲ್ಲರೂ ಸಮಾನರು. ಪ್ರಜಾಪ್ರಬುತ್ವವನ್ನ ಪ್ರತಿನಿದಿಸುತ್ತಿರೋ ಸರಕಾರನೇ, ಹಿಂದಿ ಗೊತ್ತಿದ್ರೆ ಮಾತ್ರ ಸೌಲಬ್ಯ ಅನ್ನೊ ಹಾಗಿನ ವ್ಯವಸ್ಥೆ ನಿರ್ಮಾಣ ಮಾಡೊಕ್ಕೆ ಹೊರಟಿರೋದು ಸರಿನಾ? ಪ್ರಜಾಪ್ರಬುತ್ವದಲ್ಲಿ ಕನ್ನಡಿಗರೂ, ಸರಕಾರದ ಕಾರ್ಯ/ ಸೌಲಬ್ಯಗಳ ಅನುಕೂಲ ಪಡೆಯೋಕ್ಕೆ ಹಿಂದಿ ಗೊತ್ತಿರುವವರಶ್ಟೇ ಅಹ೯ರು ಅಲ್ವ?
ಈ ಹಿಂದಿ ಹೇರಿಕೆ ಬೂತದಿಂದ ಮುಕ್ತಿ ಯಾವಗ?