ಸೋಮವಾರ, ಜುಲೈ 4, 2011

ಪೆದ್ದುತನದ ಪರಮಾವದಿ?

ಸುವರ್ಣ ಕನ್ನಡ ಪಿಲಂ ಅವಾರ್ಡ್ ಕಾರ್ಯಕ್ರಮ ಕಳೆದ ವಾರ ಟಿವಿಯಲ್ಲಿ ನೋಡಿದೆ. ನಿಜಕ್ಕು ಅದ್ಬುತವಾದ ಕಾರ್ಯಕ್ರಮ, ಪರಬಾಶೆಗಳಲ್ಲಿ ಮಾತ್ರ ನಡೆಯುತ್ತಿದ್ದ ಅದ್ದೂರಿ ಕಾರ್ಯಕ್ರಮಗಳು, ಇತ್ತೀಚಿನ ದಿನಗಳಲ್ಲಿ ಕನ್ನಡದಲ್ಲು ನಡೆಯಲು ಪ್ರಾರಂಬವಾಗಿರೋದು ನಿಜಕ್ಕೂ ಸಂತೋಶಕರ. ಈ ರೀತಿಯ ಕಾರ್ಯಕ್ರಮಗಳು, ಕನ್ನಡ ಚಿತ್ರರಂಗ, ತಾವೇನು ಯಾರಿಗೂ ಕಡಿಮೆಯಿಲ್ಲ ಅನ್ನೊದನ್ನ ಎತ್ತಿಹಿಡಿದಿದೆ....


ಈ ರೀತಿಯ ಕಾರ್ಯಕ್ರಮಗಳನ್ನ ಬಳಸಿಕೊಂಡು ಚಿತ್ರರಂಗದ ಮಾರುಕಟ್ಟೆಯನ್ನು ವಿಸ್ತಾರ ಮಾಡಿಕೊಳ್ಳಬಹುದು. ಈ ಕೆಲಸವನ್ನು ಬೇರೆ ಬಾಶೆಯ ಚಿತ್ರರಂಗದರು ತುಂಬ ಚೆನ್ನಾಗಿಯೇ ಮಾಡಿಕೊಂಡು ಬಂದಿದ್ದಾರೆ, ಆದರೆ ದುರದ್ರುಶ್ಟ ಅಂದ್ರೆ ಕನ್ನಡ ಚಿತ್ರರಂಗದ ಕಾರ್ಯಕ್ರಮಗಳಲ್ಲಿ ಪರಬಾಶೆಯ ಹಾಡು/ಕುಣಿತದೊಂದಿಗೆ ಪರಬಾಶೆಯ ಚಿತ್ರಗಳಿಗೆ ನಮ್ಮ ರಾಜ್ಯದಲ್ಲಿ ಮಾರುಕಟ್ಟೆ ನಿರ್ಮಿಸೋಕ್ಕೆ ಹೊರಟಿರೋದು ಯಾಕೆ ಅನ್ನೊದು ಗೊತ್ತಾಗುತ್ತಿಲ್ಲ.



ಕಾರ್ಯಕ್ರಮಗಳಲ್ಲಿ- ಕನ್ನಡಿಗರು ಕನ್ನಡ ಸಿನೆಮಾಗಳನ್ನ ನೋಡಿ ಉತ್ತೇಜನ ಕೊಡಬೇಕು....., ಸಿನೆಮಾ ನೋಡೊ ಹವ್ಯಾಸ ಹೊರ ರಾಜ್ಯದಲ್ಲಿರುವಶ್ಟು ನಮ್ಮಲ್ಲಿಲ್ಲ....., ಕನ್ನಡ ಸಿನೆಮಾ ನೋಡೊಕ್ಕೆ ಜನರೇ ಇಲ್ಲ...ಸಿನೆಮಾವನ್ನ ತಿಯೇಟರಿನಲ್ಲೇ ನೋಡಿ....ಹೀಗೆ ಬಾಶಣಗಳನ್ನ ಮಾಡಿ.. ಅದೇ ಕಾರ್ಯಕ್ರಮದಲ್ಲಿ ಪರಬಾಶೆಯ ಹಾಡು/ಕುಣಿತ ನಡೆಸಿದರೆ ಕನ್ನಡಿಗರ ಪಾಡು ಏನಾಗಬಾರದು. ಗಂಟೆಗಟ್ಟಳೆ ಬಾಶಣ ಮಾಡಿ ಚಿತ್ರರಂಗದ ಎಲ್ಲಾ ತೊಡುಕು/ತೊಂದರೆಗಳಿಗೆ ಕನ್ನಡ ಚಿತ್ರ ನೋಡುಗರನ್ನೇ ಹೆಚ್ಚು ಗುರಿಯನ್ನಾಗಿಸಿ, ಪರಬಾಶೆಯ ಚಿತ್ರಗಳಿಗೆ ಕೈಮುಗಿಯುವ ಜನರಿಗೆ ನೈತಿಕತೆಯ ಬಗ್ಗೆ ಅರಿವಿದೆಯೇ?

ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದವರೆ ಪರಬಾಶೆಯ ಸಿನೆಮಾಗಳಿಗೆ ಮಾರುಕಟ್ಟೆ ನಿರ್ಮಿಸಲು ಹೊರಟಿರೋದು ಇವರಿಗೆ ಕನ್ನಡದ ಬಗ್ಗೆ ಕಳಕಳಿ ಇದೆಯೇ ಎಂಬ ಪ್ರಶ್ನೆ ಹುಟ್ಟೊ ಹಾಗೆ ಮಾಡಿದೆ. ಮತ್ತು ಇದರ ಬಗ್ಗೆ ಚಿತ್ರರಂಗದಲ್ಲಿ ಎಲ್ಲೂ ವಿರೋದ ಕಂಡುಬರದಿರುವುದು ಏಕೆ ಎನ್ನುವುದು ತಿಳಿಯುತ್ತಿಲ್ಲ.


ಕನ್ನಡ ಚಿತ್ರರಂಗಕ್ಕೆ ಮಾರುಕಟ್ಟೆ ಇದೆ, ಇಲ್ಲ ಅಂದಿದ್ರೆ, ವರ್ಶಕ್ಕೆ ೧೫೦ ಕ್ಕು ಹೆಚ್ಚು ಸಿನೆಮಾಗಳು ಬಿಡುಗಡೆ ಆಗ್ತಾ ಇರಲಿಲ್ಲ, ಮತ್ತು ಮೊನ್ನೆ ನಡೆದಂತಹ ಅದ್ದೂರಿ ಕಾರ್ಯಕ್ರಮಗಳು ನಡೆಯುತ್ತಲೂ ಇರುತ್ತಿರಲಿಲ್ಲ. ಕನ್ನಡ ಚಿತ್ರರಂಗಕ್ಕೆ ಮಾರುಕಟ್ಟೆ ಇದೆ ಮತ್ತು ಈ ಮಾರುಕಟ್ಟೆಯನ್ನು ವಿಸ್ತಾರ ಮಾಡಿಕೊಳ್ಳೊ ಅವಶ್ಯಕತೆ ಕೂಡ ಇದೆ. ಇದನ್ನ ಬಿಟ್ಟು ಹಿಂದಿ ಅತವಾ ಇನ್ಯಾವುದೋ ಹಾಡಿಗೆ ಕುಣಿಯೋದರ ಮೂಲಕ ಕನ್ನಡದ ಚಿತ್ರರಂಗದ ಮಾರುಕಟ್ಟೆಯನ್ನ ಕಡಿಮೆ ಮಾಡಿಕೊಳ್ತಿರೋದು ಪೆದ್ದುತನದ ಪರಮಾವದಿ ಅಲ್ವ?

ನಿಮಗೂ ಕನ್ನಡ ಕಾರ್ಯಕ್ರಮದಲ್ಲಿ ಪರಬಾಶೆಯ ಕುಣಿತ ಏಕೆ ಅನ್ನೊ ಪ್ರಶ್ನೆ ಇದ್ರೆ,
ಚಿತ್ರರಂಗದ ಅನೇಕರು ಪೇಸ್ ಬುಕ್ ಸೇರಿದಂತೆ ಅನೇಕ ಸಾಮಾಜಿಕ ತಾಣಗಳಲ್ಲಿ ಸುಲಬವಾಗಿ ಸಿಗ್ತಿದ್ದಾರೆ ಅವರಿಗೆ ಈ ವಿಶಯವನ್ನು ತಿಳಿಸಿ, ಮುಂದಿನ ಕಾರ್ಯಕ್ರಮದಲ್ಲಾದ್ರು ಸರಿ ಮಾಡಿಕೊಳ್ತಾರಾ ನೋಡೋಣ.

6 ಕಾಮೆಂಟ್‌ಗಳು:

  1. "ಕನ್ನಡ ಚಿತ್ರರಂಗಕ್ಕೆ ಮಾರುಕಟ್ಟೆ ಇದೆ, ಇಲ್ಲ ಅಂದಿದ್ರೆ, ವರ್ಶಕ್ಕೆ ೧೫೦ ಕ್ಕು ಹೆಚ್ಚು ಸಿನೆಮಾಗಳು ಬಿಡುಗಡೆ ಆಗ್ತಾ ಇರಲಿಲ್ಲ."
    ಅರುಣ್ , ಕನ್ನಡ ಚಿತ್ರಗಳನ್ನು ತಯಾರು ಮಾಡ್ತಿರೋರು ಸುಮಾರು ಎಲ್ಲಾ ಬೇರೆ ಭಾಷೆಯವರು,ಮಿಕ್ಕಿದವರು ರಿಯಲ್ ಎಸ್ಟೇಟ್ ದುಡ್ಡನ್ನು ಸಿಕ್ಕ ಸಿಕ್ಕ ಹಾಗೆ ದುಂದು ವೆಚ್ಚ ಮಾಡ್ತಿರೋರು. ಚಿತ್ರ quality ಇಲ್ದೆ quantity ಇದ್ರೆ ಏನ್ ಪ್ರಯೋಜನ ? ಹುಡುಗೀನೆ ಚನ್ನಾಗಿಲ್ಲ ಅಂದಮೇಲೆ ಅವಳಿಗೆ ೧ ಲಕ್ಷದ ಸೀರೆ ಉಡಿಸಿದರೆ ಅಂದವಾಗಿ ಕಾಣುತ್ತಾಳ? ಹಾಗೆ ನಮ್ಮಲ್ಲಿ ಕಥೆಗೆ ಪ್ರಾಮುಖ್ಯತೆ ಕೊಡ್ತಿಲ್ಲ.

    ನಿಮ್ಮ ಇನ್ನೊದು ವಿಚಾರ ನಿಜ, ನಾವು ನಮ್ಮ ಹಾಡಿಗೆ ಕುಣಿದರೆ ಸಾಕು , ಬೇರೆ ಹಾಡು ಬೇಕಿಲ್ಲ .

    ಪ್ರತ್ಯುತ್ತರಅಳಿಸಿ
  2. ನನಗೆ ತಿಳಿದ ಮಟ್ಟಿಗೆ ಹೊರ ರಾಜ್ಯದ ನಿರ್ಮಾಪಕರು ಕನ್ನಡ ಚಿತ್ರಗಳನ್ನ ತೆಗೆಯುತ್ತಿಲ್ಲ. ಕನ್ನಡ ಚಿತ್ರಗಳಲ್ಲಿ ಶೇಕಡ ೯೦% ರಶ್ಟು ಚಿತ್ರಗಳನ್ನ ನಮ್ಮ ರಾಜ್ಯದ ನಿರ್ಮಾಪಕರೇ ತೆಗೆಯುತ್ತಿದ್ದಾರೆ. ಅವರ ತಾಯಿನುಡಿ ಬೇರೆ ಬಾಶೆ ಇರಬಹುದು ಆದ್ರೆ ಅವರನ್ನ ನಾವು ನಮ್ಮವರೆಂದೆ ಒಪ್ಪಿಕೊಂಡಿದ್ದೇವೆ. ಉದಾಹರಣೆಗೆ ರವಿಚಂದ್ರನ ರವರ ಮನೆ ಮಾತು ತಮಿಳು ಅಂದ ಮಾತ್ರಕ್ಕೆ ಅವರು ಬೇರೆ ಬಾಶೆಯವರು ಅನ್ನೊಕ್ಕೆ ಆಗುತ್ತಾ? ಹಾಗೆ ಹಲವಾರು ಜನ ನಿರ್ಮಾಪಕರು ರೆಡ್ಡಿ, ನಾಯಿಡು, ಹೀಗೆ ಹೆಸರೆ ಹೇಳುವಂತೆ ಅವರ ಮನೆಮಾತು ತೆಲುಗು ಇರಬಹುದು. ಆದ್ರೆ ಅವರೆಲ್ಲ ಕನ್ನಡದವರೆ ಅಲ್ವ? ಜೊತೆಗೆ ರಿಯಲ್ ಎಸ್ಟೇಟ್ ದುಡ್ಡು ಸಿನೆಮಾಕ್ಕೆ ಬಂದಿದ್ದರಿಂದ ಒಂದು ಮಟ್ಟಕ್ಕೆ ಒಳ್ಳೆಯದೇ ಆಗಿದೆ ಎಂದು ಬಾವಿಸುತ್ತೇನೆ, ರಿಯಲ್ ಎಸ್ಟೇಟ್ ಉದ್ಯಮಿಯಿಂದಲೇ ಅಲ್ವ ಮುಂಗಾರು ಮಳೆ ನಿರ್ಮಾಣ ಆಗಿದ್ದು. ರಿಯಲ್ ಎಸ್ಟೇಟ್ ಉದ್ಯಮಿಗಳು ಚಿತ್ರರಂಗಕ್ಕೆ ಬಂದಿದ್ದರಿಂದ ನಾಡಿನಲ್ಲಿ ಚಿತ್ರಗಳ ಸಂಕ್ಯೆ ಕೂಡ ಹೆಚ್ಚಾಗಿದೆ. ಚಿತ್ರರಂಗದ ಎಲ್ಲಾ ವರ್ಗದವರು ದುಡ್ಡು ನೋಡೊ ಹಾಗೆ ಆಗಿದೆ ಅಲ್ವ? ರಿಯಲ್ ಎಸ್ಟೇಟ್ ದುಡ್ಡನ್ನ ನಾವು ಯಾಕೆ ಕೀಳಾಗಿ ನೋಡಬೇಕು? ಅದು ಒಂದು ಉದ್ಯಮ ಅಲ್ವ? ಚಿತ್ರರಂಗದಲ್ಲಿ ದುಡ್ಡೂ ಮಾಡಿರೋ ಜನ ರಿಯಲ್ ಎಸ್ಟೇಟ್ ನಲ್ಲಿ ಹೂಡಿಕೆ ಮಾಡಿಲ್ವ? ಮಾಡಿದ್ದಾರೆ ಅಂದ್ರೆ ಅದೆ ರಿಯಲ್ ಎಸ್ಟೇಟ್ ನವರು ಚಿತ್ರರಂಗದವರು ರಿಯಲ್ ಎಸ್ಟೇಟ್ ನಲ್ಲಿ ಹೂಡಿಕೆ ಮಾಡಿದ್ರಿಂದ ರಿಯಲ್ ಎಸ್ಟೇಟ್ ಉದ್ಯಮ ಎಕ್ಕುಟ್ ಹೋಯಿತು ಅದ್ರೆ ಒಪ್ಪೊಕ್ಕಾಗುತ್ತಾ? ಇದೇ ನಿಟ್ಟಿನಲ್ಲಿ ನೋಡೀದ್ರೆ ರಿಯಲ್ ಎಸ್ಟೇಟ್ ದುಡ್ಡಿಂದ quality ಇಲ್ಲ ಅನ್ನೊಕ್ಕಾಗುತ್ತ?

    ಪ್ರತ್ಯುತ್ತರಅಳಿಸಿ
  3. thagalodhu Kannada movie galige awards..dance maadodh hindi songs galige...ivrella kannada actors ,ivarna vote maado nam janagalige buddhi illla

    ಪ್ರತ್ಯುತ್ತರಅಳಿಸಿ
  4. ಅರುಣ್;
    ನಿಮ್ಮ ಬರಹ ಮತ್ತು ರಿಯಲ್ ಎಸ್ಟೇಟ್ ದುಡ್ಡಿನ ಬಗ್ಗೆ ಪ್ರತಿಕ್ರಿಯೆ ಎರಡನ್ನೂ ಒಪ್ಪುತ್ತೇನೆ.
    ಇತೀ,
    ಉಉನಾಶೆ

    ಪ್ರತ್ಯುತ್ತರಅಳಿಸಿ
  5. Aste alla...kannada TV programm nalli judges aagi baro( hero heroin, directors, music directors) eegaste englendinda bandora haage,englishnalle mathaadthaare). Kannada programm-o athwa..bere bhaashe programm-o ansuththe. Bekaadre..Kannada bhaasheya yavdaadru reality show nodi..haage omme..tamilu,telugu malayalum reality show-na kooda omme gamanisi..!!

    ಪ್ರತ್ಯುತ್ತರಅಳಿಸಿ
  6. ಟಿ‌ವಿ ಶೋನಲ್ಲಿ ಭಾಗವಹಿಸುವ ನಿರೂಪಕರು, ನಮ್ಮ ನಾಡಿನೊಳಗೆ ಜನಪ್ರಿಯರಾದ ನಟ, ನಟಿಯರು (ಅದರಲ್ಲೂ ವಿಶೇಷವಾಗಿ ನಟಿಯರು)ಅವರು ಮಾತನಾಡುವ ದಾಟಿ ಕನ್ನಡವನ್ನು ಕೊಲ್ಲುವಂತೆ ಇರುತ್ತೆ. 70% ರಷ್ಟು ಇಂಗ್ಲೀಷ್ , 30% ರಷ್ಟು ಕನ್ನಡ ಪದಗಳನ್ನು ಉಪಯೋಗಿಸಿಕೊಂಡು ಮಾತನಾಡ್ತಾರೆ. ಒಬೊಬ್ಬರು ಕನ್ನಡ ತಮಗೆ ಬರುವುದೇ ಇಲ್ಲ ಅಥವಾ ಹೊಸದಾಗಿ ಕನ್ನಡ ಕಲಿತಿರುವವರ ತರಹ ಮಾತನಾಡ್ತಾರೆ. ಇದಕ್ಕಿನ್ತ ಬೇಸರದ ಸಂಗತಿ ಬೇಕೆ? ಅದೇ ಮಲಯಾಳಂ, ತಮಿಳು ಚಾನೆಲ್ ಗಳನ್ನು ನೋಡಲು ಹೋದರೆ ನಮಗೆ ಒಂದಿಷ್ಟು ಅರ್ಥನೇ ಆಗುವುದಿಲ್ಲ. ಏಕೆಂದರೆ ಆ ಚಾನೆಲ್ ಗಳಲ್ಲಿ ನಿರೂಪಕರುಗಳು, ನಟ, ನಟಿಯರು ಇಂಗ್ಲೀಷ್ ಪದಗಳನ್ನು ಉಪಯೋಗಿಸುವುದೇ ಕಡಮೆ.

    ಪ್ರತ್ಯುತ್ತರಅಳಿಸಿ