ಬುಧವಾರ, ಆಗಸ್ಟ್ 3, 2011

ಸಂಸತ್ತಿನಲ್ಲಿ ಕನ್ನಡದ ಕಂಪು ಸದಾ ಮೊಳಗಲಿ

ನೆನ್ನೆ ನಡೆದ ಸಂಸತ್ ಕಲಾಪದಲ್ಲಿ ನಮ್ಮ ರಾಜ್ಯದಿಂದ ಆಯ್ಕೆಯಾದ ಲೋಕಸಬಾ ಸದಸ್ಯರಾದ ಚಲುವರಾಯಸ್ವಾಮಿಯವರು ಕನ್ನಡದಲ್ಲಿ ಬಾಶಣ ಮಾಡಿ ಗಮನ ಸೆಳೆದಿದ್ದಾರೆ. ಬಹಳ ದಿನಗಳ ಮೇಲೆ ಸಂಸತ್ತಿನಲ್ಲಿ ಕನ್ನಡದ ಕಂಪು ಮೊಳಗಿದೆ.


೧೯೬೭ ರಲ್ಲಿ ಲೋಕಸಬೆಯ ಕಲಾಪಗಳಲ್ಲಿ ಕನ್ನಡದಲ್ಲಿ ಮೊಟ್ಟ ಮೊದಲ ಬಾರಿಗೆ ಜೆ ಹೆಚ್ ಪಟೇಲ್ ರವರು ಬಾಶಣ ಮಾಡಿದ್ದರು. ಮೊಟ್ಟ ಮೊದಲ ಬಾರಿಗೆ ಸಂಸತ್ತಿನಲ್ಲಿ ಕನ್ನಡದ ಡಿಂಡಿಮ ಮೊಳಗಿಸಿದ ಕೀರ್ತಿ ಪಟೇಲ್ ರವರಿಗೆ ಸಲ್ಲಬೇಕು.

ಲೋಕಸಬೆ ಕಲಾಪಗಳಿಗೆ ಹಿಂದಿ/ಇಂಗ್ಲೀಶ್ ಬರಲ್ಲ ಅಂತ ಹಲವಾರು ಜನ ಹಿಂದಿಯೇತರ ಲೋಕಸಬಾ ಸದಸ್ಯರು ಕಲಾಪಗಳಿಗೆ ಹೋಗದೆ ಅತವಾ ಹೋದರು ಯಾವುದೇ ಚರ್ಚೆಯಲ್ಲಿ ಪಾಲ್ಗೊಳ್ಳದ ಬಗ್ಗೆ ಕೇಳಿದ್ದಿವಿ. ಆದರೆ ತಮ್ಮ ಬಾಶೆಯಲ್ಲು ಬಾಶಣ ಮಾಡಲು ಪ್ರಜಾಪ್ರಬುತ್ವದಲ್ಲಿ ಅವಕಾಶವಿದ್ದರು ಹಲವಾರು ಜನ ಸದಸ್ಯರು ತಮ್ಮ ಬಾಶೆಯನ್ನ ಬಳಸದಿರುವುದು ದುರಂತವೇ! ನಿಜಕ್ಕು ಅವರು ತಮ್ಮ ಬಾಶೆಯನ್ನ ಬಳಸಿದ್ದೇ ಆದಲ್ಲಿ ವಿಶಯವನ್ನ ಅತ್ಯಂತ ನೇರ ಮತ್ತು ನಿಕರವಾಗಿ ಹೇಳಬಹುದಲ್ಲದೇ ಲೋಕಸಬಾ ಟಿವಿ ಅತವಾ ಇನ್ಯಾವುದೋ ಟಿವಿಯಲ್ಲಿ ಅವರವರ ಕ್ಷೇತ್ರದ ಜನರಿಗೂ ತಾವು ಆಯ್ಕೆ ಮಾಡಿ ಕಳಿಸಿದ ಸದಸ್ಯ ಏನ್ ಮಾತಾಡ್ತಿದ್ದಾರೆ, ಯಾವ ವಿಶಯ ಪ್ರಸ್ತಾಪಿಸುತ್ತಿದ್ದಾರೆ ಅನ್ನೊದು ತಿಳಿಯೋ ಹಾಗೆ ಆಗುತ್ತೆ.

ಇತ್ತೀಚಿನ ದಿನಗಳಲ್ಲಿ ನಮ್ಮ ನಾಡಿನಿಂದ ಆಯ್ಕೆಯಾದ ಸದಸ್ಯರಲ್ಲಿ ಹಲವಾರು ಜನರು ಕನ್ನಡದಲ್ಲೇ ಪ್ರಮಾಣವಚನ ಸ್ವೀಕರಿಸಿ, ನಾಡಿನ ಬಗೆಗಿನ ಪ್ರೀತಿಯನ್ನ ತೋರಿಸಿದ್ದಾರೆ. ಕನ್ನಡ ಬಾಶೆಯನ್ನ ಬರಿ ಪ್ರಮಾಣವಚನಕ್ಕೆ ಮಾತ್ರ ಮೀಸಲಿಡದೇ ಎಲ್ಲಾ ರೀತಿಯ ಚರ್ಚೆಯಲ್ಲಿ ಕನ್ನಡ ಬಾಶೆಯನ್ನು ಬಳಸುವಂತಾಗಬೇಕು.ನೆನ್ನೆಯ ಕನ್ನಡ ಬಾಶಣ ಎಲ್ಲಾ ಲೋಕ ಸಭಾ ಸದಸ್ಯರಿಗೂ ಮಾದರಿಯಾಗಲಿ, ಮುಂದಿನ ದಿನಗಳಲ್ಲಿ ಲೋಕಸಬೆಯಲ್ಲಿ ನಮ್ಮ ನಾಡಿನ ಬಗೆಗಿನ ವಿಶಯಗಳ ಚರ್ಚೆ ನಮ್ಮ ಬಾಶೆಯಲ್ಲೇ ನಡೆಯಲಿ.

ಮುಕ್ಯವಾಗಿ- ಇದೆಲ್ಲಾ ನಡೆಯುತ್ತಿರುವುದು ಕನ್ನಡಿಗರಲ್ಲಿ ಆಗುತ್ತಿರೋ ಜಾಗ್ರುತಿಯಿಂದಲೇ. ಕನ್ನಡಿಗ ತನ್ನ ಬಾಶೆಯ ಬಗ್ಗೆ ಜಾಗ್ರುತಿ ಹೊಂದಿದಲ್ಲಿ ಎಲ್ಲಾ ಸದಸ್ಯರು ಕನ್ನಡದಲ್ಲೇ ಬಾಶಣ ಮಾಡುವಂತಾಗುತ್ತಾರೆ.

2 ಕಾಮೆಂಟ್‌ಗಳು:

  1. ಒಳ್ಳೆಯ ಬೆಳವಣಿಗೆ , ಕನ್ನಡದಲ್ಲಿ ಮಾತಾಡೋದು ಒಂದು ಕಡೇ ಆದ್ರೆ , ಆಡೋ ಮಾತು ಅಧಿಕಾರ ಇರೋ ಪರಭಾಷ ಮಂತ್ರಿಗಳಿಗೆ ಅರ್ಥ ಮಾಡಿಸಬೇಕು
    ಇಲ್ಲದೆ ಇದ್ರೆ ಮಾತುಗಾರನ ಕ್ಷೇತ್ರಕ್ಕೆ ಸೌಲಭ್ಯ ಸಿಗುವುದು ಕಷ್ಟ. ನಮ್ಮ ನಾಡಿನ ಸಂಸತ್ ಸದಸ್ಯರು ತಮ್ಮ ಭಾಷಣ/ವಾದಗಳನ್ನು ಮಂಡಿಸುವ ಮುನ್ನ
    ವಿವೇಚನೆಯಿಂದ ಬರೆದು ಅದರ ಪ್ರತಿಯನ್ನು(ಕನ್ನಡದಲ್ಲಿ) ಸಭಾಧ್ಯಕ್ಷರಿಗೆ ಕೊಡತಕದ್ದು, ಸಂಸತ್ಅದನ್ನು ತರ್ಜಿಮೆ ಮಾಡಿಕೊಳ್ಳಲಿ ಅಥವಾ
    ಒಬ್ಬ ಭಾಷಾ ಅನುವಾದಕನನ್ನು ನೇಮಿಸಲಿ, ಇದರಿಂದ ಮುಕ್ತವಾಗಿ ಸದಸ್ಯರು ಮಾತನಾಡಬಹುದು.

    ಪ್ರತ್ಯುತ್ತರಅಳಿಸಿ
  2. @Bhashapriya, ಸಂಸತ್ತಿನಲ್ಲಿ ಬಾಶಣಗಳನ್ನ ತರ್ಜಿಮೆ ಮಾಡಲು ಅದಿಕಾರಿಗಳಿರ್ತಾರೆ. ಆದ್ರೆ ನಮ್ಮ ಸಂಸದರು ಅದರ ಬಳಕೆ ಮಾಡಿಕೊಳ್ಳಬೇಕು ಅಶ್ಟೆ. ಕೆಲವು ತಿಂಗಳ ಹಿಂದೆ ಒಂದು ವರದಿ ಪತ್ರಿಕೆಗಳಲ್ಲಿ ಬಂದಿತ್ತು. ಕನ್ನಡದ ಅನುವಾದಕರ ಹುದ್ದೆ ಬಹಳ ದಿನದಿಂದ ಸಂಸತ್ತಿನಲ್ಲಿ ಕಾಲಿ ಉಳಿದಿದೆ ಎಂದು. ಸಂಸತ್ ಸದಸ್ಯರು ಆ ಅದಿಕಾರಿಗಳನ್ನ ತರ್ಜಿಮೆ ಮಾಡಲು ಬಳಸುತಿದ್ರೆ ಆ ಹುದ್ದೆ ಕಾಲಿ ಉಳಿತನೇ ಇರಲಿಲ್ಲ.

    ಪ್ರತ್ಯುತ್ತರಅಳಿಸಿ